2-3 ಕರ್ಚಿಫ್ ಒದ್ದೆಯಾಗುವ ವರೆಗೂ ಯಾರದ್ರು ಅಳ್ತಾರ? ಡಿ.ವಿ.ಸದಾನಂದ ಗೌಡ…

317
firstsuddi

ಬೆಂಗಳೂರು- ರಾಜ್ಯದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರಾಜ್ಯದ ಅಭಿವೃದ್ದಿಯಲ್ಲಿ ಆಸಕ್ತಿ ಇಲ್ಲ. ಯಾರೆ ಆದ್ರೂ ಕಣ್ಣೀರು ಹಾಕುವುದಕ್ಕೆ ಇತಿಮಿತಿ ಇದೆ ಕಣ್ಣೀರಿನಿಂದ 2-3 ಕರ್ಚಿಫ್ ಒದ್ದೆಯಾಗುವ ವರೆಗೂ ಯಾರದ್ರು ಅಳ್ತಾರ? ಆ ಕರ್ಚಿಫ್ ನಲ್ಲಿ ಅಳುವಂಥದ್ದು ಏನೋ ಇದೆ, ಎಂದ ಅವರು ಕಾಂಗ್ರೇಸ್ ಮತ್ತು ಜೆಡಿಎಸ್ ನವರು ಯಾವಾಗ ತಬ್ಬಿಕೊಳ್ಳುತ್ತಾರೋ,ಯಾವಾಗ ಜಗಳವಾಡುತ್ತಾರೋ ಗೊತ್ತಿಲ್ಲ, ಯಾವುದೇ ಸಂದರ್ಭದಲ್ಲಿ ಬೇಕಾದರೂ ಮೈತ್ರಿ ಸರ್ಕಾರ ಬೀಳಬಹುದು.  ಬಿ.ಎಸ್ ಯಡಿಯೂರಪ್ಪ ಅವರು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ್ದಾರೆ.