ಮೂಡಿಗೆರೆ: ಬೈಕ್ ಸವಾರನ ಮೇಲೆ ಚಿರತೆ ದಾಳಿ…

494
firstsuddi

ಮೂಡಿಗೆರೆ : ಬೈಕ್ ಸವಾರನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಬೂತನಕಾಡು ಸಮೀಪ ನಿನ್ನೆ ರಾತ್ರಿ 7  ಗಂಟೆ ಸುಮಾರಿಗೆ ನಡೆದಿದ್ದು,  ಆನಂದ್ ಚಿರತೆ ದಾಳಿಗೊಳಗಾದ ಬೈಕ್‌ ಸವಾರ ಎನ್ನಲಾಗಿದ್ದು, ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಚಿರತೆ ಆನಂದ್ ಅವರ ಬೆನ್ನಟ್ಟಿದೆ. ವೇಗವಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಅವರು ಬೈಕ್ ನಿಂದ ಬಿದ್ದ ಕೂಡಲೇ ಚಿರತೆ ಬೈಕ್  ಬಿದ್ದ ಶಬ್ದ ಕೇಳಿ ಪರಾರಿಯಾಗಿದೆ. ಆನಂದ್ ಅವರ ಕೈಕಾಲಿಗೆ ಗಾಯಗಳಾಗಿದ್ದು, ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.