ತುಮಕೂರು: ಸೈನೆಡ್ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಭೂವನಹಳ್ಳಿಯಲ್ಲಿ ನಡೆದಿದೆ. ಶಿರಾದ ಭುವನಹಳ್ಳಿಯ ಚೇತನ್ (25) ಹಾಗೂ ಮಾಗೋಡು ಗ್ರಾಮದ ನಿವೇದಿತಾ(22) ಆತ್ಮಹತ್ಯೆಗೆ ಮಾಡಿಕೊಂಡ ಪ್ರೇಮಿಗಳು. ಚೇತನ್ ಹಾಗೂ ನಿವೇದಿತಾ ಪ್ರೀತಿಸುತ್ತಿದ್ದು, ಇವರ ವಿವಾಹಕ್ಕೆ ಮನೆಯವರು ನಿರಾಕರಿಸಿದ್ದರು ಎನ್ನಲಾಗಿದ್ದು , ಚೇತನ್ ಗೆ ಕಳೆದ ಒಂದು ತಿಂಗಳ ಹಿಂದೆ ಬೇರೊಬ್ಬ ಯುವತಿಯ ಜೊತೆಗೆ ಮದುವೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಚೇತನ್ ಹಾಗೂ ನಿವೇದಿತಾ ಕಳೆದ ರಾತ್ರಿ ಭೇಟಿಯಾಗಿದ್ದು, ಪ್ರೇಮ ವೈಫಲ್ಯದಿಂದ ನೊಂದಿದ್ದ ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.ಭುವನಹಳ್ಳಿಯ ಜಮೀನೊಂದರಲ್ಲಿ ಇಬ್ಬರು ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಶಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










