ಅರಣ್ಯ ಇಲಾಖೆ ಗುಂಡಿಗೆ ಬಲಿಯಾದ ನರ ಭಕ್ಷಕಿ ಅವನಿ ಹುಲಿ…

801
firstsuddi

ನವದೆಹಲಿ: ಮಹಾರಾಷ್ಟ್ರ ರಾಜ್ಯದ ಯಾವತ್ಮಲ್ ಅರಣ್ಯ ಪ್ರದೇಶದಲ್ಲಿ ಕಳೆದ 2 ವರ್ಷದಲ್ಲಿ 13 ಮಂದಿಯನ್ನು ತಿಂದಿರುವ ಅವನಿ ಎಂಬ ಹೆಣ್ಣು ಹುಲಿ ಕೊನೆಗೂ ಅರಣ್ಯಾಧಿಕಾರಿಗಳ ಗುಂಡೇಟಿಗೆ ಬಲಿಯಾಗಿದೆ. 13 ಜನರನ್ನು ಕೊಂದು ತಿಂದಿದೆ ಎಂದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ಹಾಗೂ ಆಕ್ರೋಶಗಳು ವ್ಯಕ್ತವಾಗಿದ್ದವು. ಕಳೆದ ಮೂರು ತಿಂಗಳಿಂದ ಅತ್ಯಾಧುನಿಕ ತಂತ್ರಜ್ಞಾನದ ಸಾಧನಗಳೊಂದಿಗೆ 150ಕ್ಕೂ ಹೆಚ್ಚು ಸಿಬ್ಬಂದಿಗಳು, ಆನೆಗಳು ಮತ್ತು ತಜ್ಞ ಟ್ರ್ಯಾಕರ್ ಮತ್ತು ಶೂಟರ್ ಗಳು ಹುಲಿಬೇಟೆಗೆ ಸಜ್ಜಾಗಿದ್ದವು ಎಂದು ತಿಳಿದು ಬಂದಿದೆ.