ಮಂಡ್ಯದಲ್ಲಿ ಸರಣಿ ಅಪಘಾತ, ಬೈಕ್​ ಸವಾರರಿಬ್ಬರ ದುರ್ಮರಣ…

246
firstsuddi

ಮಂಡ್ಯ :ಇಂದು ಬೆಳ್ಳಿಗ್ಗೆ  ಬೈಕ್,  ಕಾರು ಹಾಗೂ ಟೆಂಪೋ ಟ್ರಾವೆಲ್ಸ್‌ ನಡುವೆ ಸರಣಿ  ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿದ್ದಯ್ಯನ ಕೊಪ್ಪಲು ಗೇಟ್ ಬಳಿಯ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಮಾದೇಶ್ (45) ಹಾಗೂ ಜೇಮ್ಸ್ (30) ಮೃತರು . ಇಂದು ಬೆಳಗ್ಗೆ  ಮಾದೇಶ್ ಹಾಗೂ ಜೇಮ್ಸ್ ಗಾರೆ ಕೆಲಸಕ್ಕೆಂದು  ಬೈಕ್‍ನಲ್ಲಿ ತೆರಳುತ್ತಿದ್ದಾಗ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಟೆಂಪೋ ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಇದೇ ವೇಳೆ ಅದರ ಹಿಂದೆ ವೇಗವಾಗಿ ಬರುತ್ತಿದ್ದ ಬೈಕ್ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು  ಸ್ಟಳದಲ್ಲೇ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.