ಬೆಂಗಳೂರು : ನಟ ರಣ್ ವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ವಿವಾಹ ಇಟಲಿಯ ಲೇಕ್ ಕೋಮೊದಲ್ಲಿ ನವೆಂಬರ್ 14ರಂದು ಕೊಂಕಣಿ ಸಂಪ್ರದಾಯದಲ್ಲಿ ಹಾಗೂ ನವೆಂಬರ್ 15ರಂದು ಸಿಂಧ್ ಸಂಪ್ರದಾಯದಲ್ಲಿ ನಡೆದಿತ್ತು. ಮದುವೆಯ ಬಳಿಕ ಈ ನವ ಜೋಡಿ ನಿನ್ನೆ ಬೆಂಗಳೂರಿಗೆ ಬಂದಿದ್ದಾರೆ. ಇಂದು ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ನವದಂಪತಿಯ ಅದ್ಧೂರಿ ಆರತಕ್ಷತೆ ನಡೆಯಲಿದೆ. ಎರಡನೇ ಆರತಕ್ಷತೆ ಕಾರ್ಯಕ್ರಮ ಮುಂಬೈನ ಗ್ರ್ಯಾಂಡ್ ಹಟ್ ನಲ್ಲಿ ನವೆಂಬರ್ 28 ರಂದು ನಡೆಯಲಿದೆ.










