“ಮನಸಾರೆ” ಜೋಡಿ, ದಿಗಂತ್ ಹಾಗೂ ಐಂದ್ರಿತಾ ರೈ ಮದುವೆ ಡೇಟ್ ಫಿಕ್ಸ್…

511
firstsuddi

ಬೆಂಗಳೂರು :ಸ್ಯಾಂಡಲ್‌ವುಡ್‌ ನಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರಲು ಸಿದ್ಧತೆ ನಡೆಸಿದೆ. ನಟ ದಿಗಂತ್  ಹಾಗೂ ನಟಿ  ಐಂದ್ರಿತಾ ರೈ ಕಳೆದ  ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಮದುವೆ  ಡಿಸೆಂಬರ್  11 ಡಿಸೆಂಬರ್ 12 ಕ್ಕೆ ನಿಗದಿಯಾಗಿದ್ದು, ಸರಳವಾಗಿ ವಿವಾಹವಾಗಲು ದಿಗಂತ್ ಹಾಗೂ  ಐಂದ್ರಿತಾ ರೈ ನಿರ್ಧರಿಸಿದ್ದಾರೆ.  ಡಿಸೆಂಬರ್ 15ಕ್ಕೆ ಸಿನಿ  ಸ್ನೇಹಿತರಿಗೆ ಪಾರ್ಟಿ ಕೊಡಲಿದ್ದಾರೆ. ಮನಸಾರೆ , ಪಾರಿಜಾತ ಚಿತ್ರಗಳಲ್ಲಿ  ಈ ಜೋಡಿ ಒಟ್ಟಾಗಿ ತೆರೆ ಹಂಚಿಕೊಂಡಿದ್ದರು.