ಮಂಡ್ಯದ ಯೋಧ ಗುರು ಹುತಾತ್ಮ…

221
firstsuddi

ಮಂಡ್ಯ :ಜಮ್ಮುವಿನ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ರಾಜ್ಯದ ಯೋಧ ಹೆಚ್.ಗುರು (33) ಹುತಾತ್ಮರಾಗಿದ್ದಾರೆ. 82ನೇ ಬೆಟಾಲಿಯನ್ ನ ಯೋಧರಾಗಿದ್ದ ಗುರು ಅವರು ಮಂಡ್ಯದ ಮದ್ದೂರಿನ ಗುಡಿಗೆರೆ ನಿವಾಸಿ .ಗುರು ಅವರು ಕೇವಲ ಎಂಟು ತಿಂಗಳ ಹಿಂದಷ್ಟೇ ಕಲಾವತಿ ಎಂಬುವವರನ್ನು ವಿವಾಹವಾಗಿದ್ದರು. ಗುರು ಅವರು ಹುತಾತ್ಮರಾದ ಸುದ್ದಿ ತಿಳಿದು ಕುಟುಂಬಸ್ಥರು ತೀವ್ರವಾದ ದುಃಖದಲ್ಲಿದ್ದಾರೆ.ಪತಿ ಹುತಾತ್ಮರಾದ ವಿಷಯ ತಿಳಿದು ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ.