ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ನಟ ದರ್ಶನ್…

232
firstsuddi

ಬೆಂಗಳೂರು :ಜಮ್ಮುವಿನ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಭಾರತದ  ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಯೋಧರಿಗೆ ದರ್ಶನ್ ಅವರು ನಮನ ಸಲ್ಲಿಸಿದ್ದು, ನಿನ್ನೆ ನಡೆದ ಪಲ್ವಾಮಾ ದಾಳಿ ಬಗ್ಗೆ ಸುದ್ದಿ ತಿಳಿದು ಬಹಳ ದುಃಖವಾಯಿತು.ಆ ಕೆಚ್ಚೆದೆಯ ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ನಾನು ಪ್ರಾರ್ಥಿಸುತ್ತೇನೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹುತಾತ್ಮರಾದ ಯೋಧರಿಗೆ ದರ್ಶನ್ ಅವರು ನಮನ ಸಲ್ಲಿಸಿದ್ದಾರೆ. ಭಯೋತ್ಪಾದನೆ ಯಾವತ್ತು ಮಾನವ ಕುಲಕ್ಕೆ ಅಪಾಯಕಾರಿ, ಅದನ್ನು ಸಮಾಜದಿಂದ ಬುಡ ಸಹಿತ ಕಿತ್ತು ಹಾಕಬೇಕು ಎಂದು ಟ್ವಿಟ್ ಮಾಡಿದ್ದಾರೆ.