ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಪರೀಕ್ಷೆಯ ಸೀನಿಯರ್ ವಿಭಾಗದಲ್ಲಿ ಮೇಧಾಶ್ರೀ ಎಂ. ಜೋಯ್ಸ್ ಜಿಲ್ಲೆಗೆ ಪ್ರಥಮ ಸ್ಥಾನ…

313
firstsuddi

ಚಿಕ್ಕಮಗಳೂರು: ರಾಜ್ಯ ಪ್ರೌಢಶಿಕ್ಷಣ ಮಂಡಳಿ ಇತ್ತೀಚೆಗೆ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಪರೀಕ್ಷೆಯ ಸೀನಿಯರ್ ವಿಭಾಗದಲ್ಲಿ ನಗರದ ಭಾರತೀ ಕಲಾ ಪೀಠದ ಮೇಧಾಶ್ರೀ ಎಂ. ಜೋಯ್ಸ್ ಶೇ. 91.5 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಬಿಎಸ್‍ಎನ್‍ಎಲ್ ಉದ್ಯೋಗಿ ಮುಕುಂದ ಜೋಯ್ಸ್ ಹಾಗೂ ಸವಿತಾ ದಂಪತಿಯ ಪುತ್ರಿಯಾಗಿರುವ ಮೇಧಾಶ್ರೀ ಸಾಯಿ ಏಂಜೆಲ್ಸ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದು, ಭಾರತೀ ಕಲಾ ಪೀಠದ ವಿದ್ವಾನ್ ನಾರಾಯಣಸ್ವಾಮಿ ಮತ್ತು ವಿದುಷಿ ರಾಗಜ್ಯೋತಿ ಅವರ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದಾಳೆ.