ನಾಳೆ ಹಾಸನದಲ್ಲಿ ಜೆಡಿಎಸ್ ಶಾಸಕರ ಸಭೆ…

228
firstsuddi

ಬೆಂಗಳೂರು: ಆಪರೇಷನ್ ಕಮಲದ ಭೀತಿಯಲ್ಲಿರುವ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ನಾಳೆ ಎಲ್ಲ ಶಾಸಕರೊಂದಿಗೆ
ಸಭೆ ನಡೆಸಲಿದ್ದು, ಬೆಂಗಳೂರಿನಿಂದ ಹೊರಗೆ ಎಲ್ಲಾ ಶಾಸಕರನ್ನೂ ಒಟ್ಟಿಗೆ ಸೇರಿಸಿ ಆಂತರಿಕ ಸಭೆ ನಡೆಸಲು ಜೆಡಿಎಸ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಜೆಡಿಎಸ್ ಮುಂದಾಗಿದ್ದು,ಆಪರೇಷನ್ ಕಮಲ ಹೆಸರಿನಲ್ಲಿ ಯಾರಿಗಾದ್ರೂ ಆಮಿಷ ಒಡ್ಡಲಾಗಿದೆಯಾ ಎಂದು ಪಕ್ಷದ ವರಿಷ್ಠರು ಪರಿಶೀಲಿಸಿದ್ದಾರೆ.  ಪಕ್ಷದ ಎಲ್ಲಾ ಶಾಸಕರ ಜೊತೆ ವರಿಷ್ಠರು ಹಾಸನದಲ್ಲಿ ಸಭೆ ನಡೆಸಲಿದ್ದಾರೆ.ಇಂದು ಸಂಜೆ ಎಲ್ಲ ಶಾಸಕರು ಹಾಸನ ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.