ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮೇಲ್ಛಾವಣೆ ಕುಸಿತ, ಒರ್ವ ಬಾಲಕಿ ಸಾವು…

292
firstsuddi

ಬಳ್ಳಾರಿ :ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮನೆಯ ಮೇಲ್ಛಾವಣೆ ಕುಸಿದ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆ ಪಟ್ಟಣದ ಚಿತ್ತವಾಡಗಿಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಉಷಾ (14) ಎಂಬ ಬಾಲಕಿ ಮೃತಪಟ್ಟಿದ್ದಾರೆ. ಗಾಯಗೊಂಡವರ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ತವಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.