ಮೂಡಿಗೆರೆ : ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಗೂಂಡಾ ವರ್ತನೆ ತೋರಿದ್ದು, ಹುಲಿ ಉಗುರು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಗರಂ ಆದ ಘಟನೆ ತಡರಾತ್ರಿ ನಡೆದಿದೆ. ಹುಲಿ ಉಗುರು ಮಾರಾಟ ಮಾಡುತ್ತಿದ್ದ ವೆಂಕಟೇಶ್, ರಂಜಿತ್,ಶಿವಕುಮಾರ್ ಎಂಬುವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದರು. ಇದಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಪ್ರಕರಣವನ್ನು ದಾಖಲಿಸದಂತೆ ಅರಣ್ಯ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದು, ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಜಗಳಕ್ಕೆ ನಿಂತು ಆವಾಜ್ ಹಾಕಿ ನನ್ನ ಫೋನ್ ರಿಸೀವ್ ಮಾಡ್ದೆ ಇದ್ರೆ ಆಫೀಸ್ ಬಾಗಿಲು ಹಾಕಿಸ್ತೀನಿ, ರಂಪಮಾಡಿ ಬಿಡ್ತೀನಿ ನನಗೆ ಏನು ಸಮಸ್ಯೆ ಆಗಲ್ಲ ಎಂದು ಅಧಿಕಾರಿಗಳನ್ನು ಏಕವಚನದಲ್ಲೇ ನಿಂದಿಸಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ರಂಪಾಟ ಮಾಡಿದ್ದಾರೆ . ಈ ಹಿಂದೆ ಮಾಕೋನಹಳ್ಳಿ ಸಮೀಪ ಪೊಲೀಸರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಬಂದಿಸಿ ಪ್ರಕರಣ ದಾಖಲಿಸಿದಕ್ಕೆ ಮೂಡಿಗೆರೆ ಪೋಲೀಸರ ಮೇಲೆ ಈ ರೀತಿಯೇ ಗೂಂಡಾ ವರ್ತನೆ ತೋರಿದ್ದರು ಎನ್ನಲಾಗಿದ್ದು, ಈ ರೀತಿ ಅಧಿಕಾರಿಗಳ ವಿರುದ್ಧ ಶಾಸಕರು ದರ್ಪ ತೋರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇಂತಹ ಶಾಸಕನನ್ನು ಆಯ್ಕೆ ಮಾಡಿದಕ್ಕೆ ಮೂಡಿಗೆರೆ ಕ್ಷೇತ್ರದ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.









