ಚಿಕ್ಕಮಗಳೂರು ಜಿಪಂ ಅಧ್ಯಕ್ಷರಿಗೆ ಮೋದಿ ಭೇಟಿಗೆ ಕರೆಯ ಹಿಂದಿದೆ ದೊಡ್ಡ ಷಡ್ಯಂತ್ರ!?

1381

ಮೂಡಿಗೆರೆ : ಪ್ರಧಾನಿ ನರೇಂದ್ರ ಮೋದಿ ಕಚೇರಿಯಿಂದ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರ ಶ್ರೀ ಮಾಲತೇಶ್ ಅವರಿಗೆ ಕರೆ ಬಂದಿದೆಯಂತೆ, ಆ ಕರೆಯ ಮಾಹಿತಿಯ ಪ್ರಕಾರ ಕಳೆದ ಹದಿನೈದು ದಿನದ ಹಿಂದೆಯೇ ಕರೆ ಮಾಡಿ ನೀವು ನರೇಂದ್ರ ಮೋದಿಯವರನ್ನು ಭೇಟಿ ಮಾಡಬಹುದು, ನಿಮ್ಮ ಮಾಹಿತಿಗಳೆಲ್ಲವೂ ನಮ್ಮ ಕಚೇರಿಗೆ ತಲುಪಿದೆ ಅಂತಾ ಹೇಳಿದ್ರಂತೆ. ಆದರೆ ಇದರ ಅಧಿಕೃತ ಮಾಹಿತಿ ಪ್ರಧಾನಿ ಕಚೇರಿಯಿಂದ ಬರುವವರೆಗೂ ಇದು ಕೇವಲ ಪ್ರಚಾರದ ಸರಕೇ ವಿನಃ, ಪಕ್ಕಾ ಆಗುವುದಿಲ್ಲ. ಈ ಮೋದಿ ಭೇಟಿಯ ಕರೆಯ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟುತ್ತದೆ, ಅದಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷರೇ ಉತ್ತರಿಸಬೇಕಾಗುತ್ತದೆ. ನಮ್ಮ ಅನೇಕ ಪ್ರಶ್ನೆಗಳು ಇಲ್ಲಿವೆ..

  1. ನಿಜವಾಗಿಯೂ ನರೇಂದ್ರ ಮೋದಿ ಅವರ ಕಚೇರಿಯಿಂದ ಫೋನ್ ಕರೆ ಬಂದಿತ್ತಾ ಅಥವಾ ಪಟಾಕಿ ಆರಿಸಿದ್ದಾ !? ಬಂದಿದ್ದರೆ ಅದಕ್ಕೆ ಸಾಕ್ಷಿ ಏನು ?
  2. ನಿಮಗೆ ನರೇಂದ್ರ ಮೋದಿ ಕಚೇರಿಯಿಂದ ಭೇಟಿಗೆ ಕರೆ ಬಂದಿದೆ, ಇದಕ್ಕೆ ಖುಷಿ ಪಡೋಣ ಆದರೆ ಹದಿನೈದು ದಿನಗಳ ಹಿಂದೆ ಬಂದಿರೋದನ್ನ ಇವತ್ತು ಬಹಿರಂಗ ಮಾಡಿದ್ದು ಏಕೆ ?
  3. ಇವತ್ತು ಮಾಧ್ಯಮಗಳಲ್ಲಿ ಕೂತು, ಅಯ್ಯೋ ನನಗೆ ಮೋದಿ ಭೇಟಿಗೆ ಕರೆ ಬಂದಿದೆ.. ಮೋದಿ ಭೇಟಿ ಕರೆ ಬಂದಿದೆ.. ನನಗೆ ತುಂಬಾ ಖುಷಿಯಾಗುತ್ತಾ ಇದೆ ಅಂತಾ ಇಷ್ಟೋಂದ್ ಎಕ್ಸೈಟ್ ಆಗುತ್ತಾ ಇದಿರಲ್ಲಾ ಅದಕ್ಕೆ ಕಾರಣವೇನು ?
  4. ಪ್ರತಿಯೊಬ್ಬ ಮನುಷ್ಯನಿಗೆ ಬಂಪರ್ ಹೊಡೆದ ಆದ ದಿನ ಖುಷಿ ಇರುತ್ತೆ, ಆದರೆ ನಿಮಗೆ ಹದಿನೈದು ದಿನ ಬಿಟ್ಟು ಬಂದಿದೆಲ್ಲಾ ಯಾಕೆ ?
  5. ನಾಳೆ (ಶುಕ್ರವಾರ ಫೆ. 16) ಬಿಜೆಪಿ ಕೋರ್ ಕಮಿಟಿ ಸಭೆ ಇದೆಯಲ್ಲಾ ಆ ಸಭೆಗೆ ಒಂದು ಮೆಸೇಜ್ ಪಾಸ್ ಮಾಡೋದಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡಿದ್ರಾ ?
  6. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಯಾಕೆ ನೀಡುತ್ತಿಲ್ಲ ?
  7. ನಿಮ್ಮ ಬೆನ್ನಿಗೆ ನಿಂತಿರುವ ಚಿಕ್ಕಮಗಳೂರಿನ ಆ ಪ್ರಭಾವಿ ನಾಯಕ ಯಾರು ?
  8. ಚಿಕ್ಕಮಗಳೂರಿನಲ್ಲಿರುವ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ನಾವು ಪಕ್ಷ ನಿಷ್ಠರು., ನಾವು ಪಕ್ಷ ನಿಷ್ಠರು.. ಅಂತಾ ಭಾಷಣ ಬಿಗಿತಾರಲ್ಲಾ, ಅವರಿಗೆಲ್ಲಾ ಪಕ್ಷ ನಿಷ್ಠೆಯ ಸ್ವಾಭಿಮಾನ ಎಲ್ಲಿ ಹೋಯಿತೋ ?
  9. ಪಕ್ಷ ರಾಜೀನಾಮೆ ಕೊಡು ಅಂತಿದ್ದರೂ, ಸ್ವಂತ ನಿಷ್ಠೆಗೆ ರಾಜೀನಾಮೆಯ ಧಿಕ್ಕು ತಪ್ಪಿಸುವ ಪ್ರಯತ್ನ ಮೋದಿಯ ಹೆಸರಲ್ಲಿ ಆಯಿತಲ್ಲಾ ?
  10. ಮೂಡಿಗೆರೆ ಕ್ಷೇತ್ರಕ್ಕೆ ಸ್ಪರ್ಧಿಸಬೇಕು ಅಂತಾ ಗ್ರಾಮ ವಾಸ್ತವ್ಯ ಮಾಡಿದ್ದೀರಾ ?, ಈಗ ನಾನು ಅಭಿವೃದ್ಧಿಗಾಗಿ, ಜನರ ಕಷ್ಟ ನಿವಾರಣೆಗಾಗಿ ಗ್ರಾಮ ವಾಸ್ತವ್ಯ ಮಾಡಿದೆ ಅಂತಾ ಹೇಳ್ತಾ ಇದ್ದೀರಾ ?                                                   ಯಡಿಯೂರಪ್ಪ ಅಲ್ಲ, ನರೇಂದ್ರ ಮೋದಿಯವರ ಕಣ್ಣಿಗೆ ಮಣ್ಣೆರಚಿ ಟಿಕೆಟ್ ತರಬಹುದು, ಆದರೆ ಕ್ಷೇತ್ರ ಜನರ ಕಣ್ಣಿಗೆ ಮಣ್ಣು ಎರಚುವುದು ಸಾಧ್ಯವಾಗುವುದಿಲ್ಲ.