ಮೂಡಿಗೆರೆ:ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ…

601

ಮೂಡಿಗೆರೆ: ಶಬರಿಮಲೆ ದೇವಸ್ಥಾನಕ್ಕೆ 10 ರಿಂದ 50 ವರ್ಷದ ಮಹಿಳೆಯರ ಪ್ರವೇಶ ವಿರೋಧಿಸಿ ಹಳೇ ಪದ್ದತಿಯನ್ನು ಮುಂದುವರೆಸಬೇಕು ಎಂದು ಹಾಗೂ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಸುಪ್ರೀಂಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಮೂಡಿಗೆರೆ ಹಾಗೂ ಸಮಸ್ತ ಅಯ್ಯಪ್ಪ ಸ್ವಾಮಿ ಭಕ್ತರು ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮೂಡಿಗೆರೆ ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷರಾದ ಮಂಚೇಗೌಡ, ಮದೀಶ್, ಸಂಜಯ್ ಕೊಟ್ಟಿಗೆಹಾರ, ಸುಧೀರ್, ಭಕ್ತದಿಗಳಾದ ವಲೇಕರಟ್ಟಿ ಚಂದ್ರೇಗೌಡ,ಆಶಾ ಮೋಹನ್,  ಬಾಲು, ವಿಮಲ, ಬಣಕಲ್ ಅಭಿ, ಪ್ರವೀಣ್ ಪೂಜಾರಿ, ಕೊಟ್ಟಿಗೆಹಾರ ಶರತ್, ಸೇರಿದಂತೆ ಇತರರು ಇದ್ದರು.