ಅಮೃತಸರ: ರಾವಣ ಸಂಹಾರದ ಕಾರ್ಯಕ್ರಮವನ್ನು ನೋಡುತ್ತಿದ್ದ ಜನರ ಮೇಲೆ ರೈಲು ಹರಿದ ಪರಿಣಾಮ 50ಕ್ಕೂ ಹೆಚ್ಚು ಜನ ಮೃತಪಟ್ಟ ಘಟನೆ ಪಂಜಾಬ್‌ನ ಅಮೃತಸರದ ಜೋದಾ ಪಾಟ್ಕರ್‌ನಲ್ಲಿ ನಡೆದಿದೆ. ರೈಲು ಪಠಾಣ್ ಕೋಟ್ ನಿಂದ ಅಮೃತಸರಕ್ಕೆ ಬರುತ್ತಿತ್ತು. ಈ ವೇಳೆ ರೈಲು ಹಳಿ ಪಕ್ಕದಲ್ಲೇ ದಸರಾ ಪ್ರಯುಕ್ತ ರಾವಣನ ದಹನ ನಡೆಯುತ್ತಿತ್ತು . ಪಟಾಕಿ ಸದ್ದಿನಲ್ಲಿ ರೈಲು ಬಂದಿದ್ದು ಯಾರ ಗಮನಕ್ಕೂ ಬರದೇ ರೈಲು ಜನರ ಮೇಲೆ ಹರಿದಿದೆ. ಸ್ಥಳದಲ್ಲೇ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಪಂಜಾಬ್ ಸರ್ಕಾರ ಮೃತರ ಕುಟುಂಬದವರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.











