ಮೂಡಿಗೆರೆ- ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಶಾಸಕರಾಗಿ ಆಯ್ಕೆಯಾದ್ರೆ ವಿಶೇಷ ಪೂಜೆ ಸಲ್ಲಿಸುವುದಾಗಿ ಮೂಡಿಗೆರೆ ತಾಲೂಕಿನ ಬೈರಾಪುರ ಸಮೀಪದ ಉಳಿಗೆಮನೆ ಚೌಡೇಶ್ವರಿಗೆ ಗ್ರಾಮಸ್ಥರು ಹರಿಕೆ ಕಟ್ಟಿಕೊಂಡಿದ್ದು ಅದರಂತೆ ಎಂ.ಪಿ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆದ್ದಿದ್ದು ಗ್ರಾಮಸ್ಥರು ಶಾಸಕ ಕುಮಾರಸ್ವಾಮಿ ನೇತೃತ್ವದಲ್ಲಿ ದೇವರಿಗೆ ಹರಿಕೆ ತೀರಿಸಿದ್ದು ಈ ವೇಳೆ ಮಳೆಯ ನಡುವೆಯೂ ಶಾಸಕ ಎಂ.ಪಿ ಕುಮಾರಸ್ವಾಮಿ ತಮಟೆ ಗೆ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು.ಜೊತೆಗೆ ಗ್ರಾಮಸ್ಥರೆಲ್ಲ ಶಾಸಕರ ಗೆಲುವನ್ನು ತಮಟೆ ಹಾಗೂ ಇತರ ವಾದ್ಯಗಳ ಸದ್ದಿಗೆ ಸ್ಟೆಪ್ ಹಾಕಿದ್ರು ಅಪ್ಪಟ ಜನಪದ ಕಲೆ ತಮಟೆಯನ್ನು ಶಾಸಕರು ನೂರಿತ ಕಲಾವಿದನಂತೆ ಬಾರಿಸಿ ಎಲ್ಲರ ಗಮನ ಸೆಳೆದರು.