ಬೆಂಗಳೂರು- ಎರಡು ವರ್ಷದ ನಂತರ ಸಚಿವರ ಸ್ಥಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಡಾ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಶಾಸಕರ ಕಾರ್ಯ ಕ್ಷಮತೆಯ ಮೇಲೆ ಖಾತೆ ಬದಲಾವಣೆ ಎಂದು ನಮಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ. ಇನ್ನು ಆರು ಖಾತೆಗಳು ಬಾಕಿ ಇದೆ. ಆ ಖಾತೆಗಳನ್ನು ಸಧ್ಯದಲ್ಲೆ ಭರ್ತಿ ಮಾಡುತ್ತೇವೆ. ಈಗಾಗಲೇ ನಾನು ಮತ್ತು ಡಿ.ಕೆ ಶಿವಕುಮಾರ್ ಎಂ.ಬಿ ಪಾಟೀಲ್ ಬಳಿ ಮಾತನಾಡಿದ್ದೇವೆ. ಕಾಂಗ್ರೇಸ್ ನ ಎಲ್ಲಾ ಶಾಸಕರು ಸನ್ನಿವೇಷವನ್ನು ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಪ್ರಾರಂಭದಲ್ಲಿ ಇಂತಹ ಗೊಂದಲಗಳು ಸಾಮಾನ್ಯವಾಗಿ ಇರುತ್ತದೆ. ಎಂದು ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.