ಮೂಡಿಗೆರೆ : ಶಿವಮೊಗ್ಗ ಕಾರ್ ಡೀಲರ್ ಪರಮೇಶ್ ಅವರ ಬ್ಯಾಂಕ್ ಲಾಕರ್ ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ ಮಾಧ್ಯಮದವರ ಮೇಲೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗರಂ ಆಗಿ ಉತ್ತರ ನೀಡಿದ್ದು, ಅವರ ಬಗ್ಗೆ ನನ್ನ ಹತ್ತಿರ ಯಾಕೆ ಪ್ರಶ್ನೆ ಕೇಳುತ್ತಾ ಇದ್ದೀರಾ ಅವರ್ಯಾರು, ಅದಕ್ಕೆ ನಾನು ಏನು ಮಾಡಬೇಕು. ಅದಕ್ಕೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಾರೆ. ಅವರು ವ್ಯವಹಾರ ಮಾಡಿಕೊಂಡು ಇದ್ದಾರೆ. 25 ವರ್ಷದಿಂದ ಬ್ಯುಸಿನೆಸ್ ಮಾಡುತ್ತಿದ್ದಾರೆ. ಅವರೇನು ರಾಜಕೀಯ ವ್ಯಕ್ತಿನಾ ? ಕಾನೂನು ವಿರುದ್ಧ ಯಾರೂ ಏನೇ ಮಾಡಿದರೂ ಅದು ತಪ್ಪೇ. ಐಟಿ ದಾಳಿ ಮಾಡಿಕೊಳ್ಳಲಿ ಯಾರು ನಿಮ್ಮನ್ನು ಇಟ್ಟುಕೊಂಡಿರೋದು ಅದಕ್ಕೂ ನನಗೂ ಸಂಬಂಧವೇನು, ಆ ಪ್ರಶ್ನೆ ನನಗ್ಯಾಕೆ ಕೇಳುತ್ತೀರ. ಅವರು ನಮ್ಮ ಪಕ್ಷದ ಅಭಿಮಾನಿಯೂ ಅಲ್ಲ, ದೂರದ ಸಂಬಂಧಿ ಅಷ್ಟೇ. ಆ್ಯಕ್ಷನ್ ತೆಗೆದುಕೊಳ್ಳಿ ನಾನೇನು ಬೇಡ ಅಂತೀದ್ದೀನಾ ಎಂದು ಖಾರವಾಗಿ ಉತ್ತರಿಸಿದರು.









