ಮೂಡಿಗೆರೆ : ಹಳಸೆ ಶಿವಣ್ಣ ಅವರಿಗೆ ಬಿಜೆಪಿ ಯುವಮೋರ್ಚಾ ವತಿಯಿಂದ ಅಭಿನಂದನೆ…

720
firstsuddi

ಮೂಡಿಗೆರೆ : ಸಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಹಳಸೆ ಶಿವಣ್ಣ ಅವರನ್ನು ಹಳಸೆ ನಿವಾಸದಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ ಅವರು, ನನಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿದ ಎಲ್ಲರಿಗೂ ನಾನು ಋಣಿಯಾಗಿದ್ದೇನೆ. ನನ್ನ ಮುಂದಿನ ಆಡಳಿತಾವಧಿಯಲ್ಲಿ ಹೆಚ್ಚು ಹೆಚ್ಚು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದರೊಂದಿಗೆ ಸದಾ ನಿಮ್ಮೊಂದಿಗೆ ಇರುತ್ತೇನೆ. ಹಾಗೂ ನನ್ನ ಗೆಲುವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದರು. ಈ ಸಂದರ್ಭದಲ್ಲಿ ಮೂಡಿಗೆರೆಯ ಯುವಮೋರ್ಚಾ ಅಧ್ಯಕ್ಷ ಸಂಜಯ್ ಕೊಟ್ಟಿಗೆಹಾರ, ಪರೀಕ್ಷಿತ್ ಜಾವಳಿ, ನವೀನ್ ಹವ್ವಳ್ಳಿ, ರಕ್ಷಿತ್, ಅನಿಲ್, ಸುನೀಲ್, ಗುರುದತ್ ಸೇರಿದಂತೆ ಇತರರು ಇದ್ದರು.