ಮೂಡಿಗೆರೆ : (ಕೊರೋನ ಫಿಯರ್) ಇಂಡಿಯಾ ಲೌಕ್‍ಡೌನ್ ಹಿನ್ನೆಲೆ ಮಾಸ್ಕ್ ಧರಿಸಿ ಮದುವೆಯಾದ ವಧು-ವರರು…

1142

ಮೂಡಿಗೆರೆ :ಕೊರೋನಾ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದ ಹಿನ್ನೆಲೆ ಇಂದು ನಡೆಯಬೇಕಿದ್ದ ಮದುವೆಯಲ್ಲಿ ವಧು-ವರರಿಬ್ಬರು ಮುಖಕ್ಕೆ ಮಾಸ್ಕ್ ಧರಿಸಿ ವಧುವಿನ ಮನೆಯಲ್ಲೇ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ತಾಲೂಕಿನ  ಹಲಸುಗುಡ್ಡೆ ಗ್ರಾಮದಲ್ಲಿ ನಡೆದಿದೆ. ಬಣಕಲ್‍ನ ಚರ್ಚ್ ಹಾಲ್‍ನಲ್ಲಿ ಇಂದು ಸುಶಾಂತ್ ಹಾಗೂ ನಿಶ್ಚಿತ ಮದುವೆ ನಿಗಧಿಯಾಗಿತ್ತು. ಆದ್ರೆ, ಕೊರೋನ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿರೋದ್ರಿಂದ ಅದ್ಧೂರಿ ಮದುವೆಯನ್ನ ಕ್ಯಾನ್ಸಲ್ ಮಾಡಿ, ವಧುವಿನ ಸ್ವಗ್ರಾಮದಲ್ಲಿ ಸರಳವಾಗಿ ಮದುವೆ ನಡೆಸಲಾಯ್ತು. ಈ ವೇಳೆ, ಮದುವೆಗೆ ಆಗಮಿಸಿದ್ದ ಬಂಧುಗಳು ಸೇರಿದಂತೆ ವಧು-ವರರಿಬ್ಬರು ಕೂಡ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಹಾರ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕವೂ ಫ್ಯಾಮಿಲಿ ಫೋಟೋದಲ್ಲೂ ಕೂಡ ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಫೋಟೋ ಕೂಡ ತೆಗಿಸಿಕೊಂಡಿದ್ದಾರೆ. ಈ ವೇಳೆ, ಮದುವೆ ಮಾಡಿಸಿದ ಪುರೋಹಿತರು ಕೂಡ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಸಾಮಾಜಿಕ ಅಂತರದಲ್ಲಿ ಸ್ತೋತ್ರಗಳನ್ನ ಪಠಿಸಿ ಮದುವೆ ಮಾಡಿಸಿದ್ದಾರೆ.