ಮೂಡಿಗೆರೆ :ಮೊಟ್ಟೆ ನುಂಗಿ ಅಸ್ವಸ್ಥಗೊಂಡಿದ್ದ ನಾಗರಹಾವಿನ ಮರಿಗೆ ಚಿಕಿತ್ಸೆ ನೀಡುತ್ತಿದ್ದಂತೆ ನಾಲ್ಕು ಮೊಟ್ಟೆಗಳನ್ನು ಕಕ್ಕಿದೆ…

921

ಮೂಡಿಗೆರೆ : ನಾಲ್ಕು ಮೊಟ್ಟೆಗಳನ್ನೂ ನುಂಗಿ ಮರಿ ನಾಗರಹಾವೊಂದು ಅಸ್ವಸ್ಥಗೊಂಡಿದ್ದ ಘಟನೆ ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ನಡೆದಿದೆ. ಗೋದಿ ನಾಗರಹಾವಿನ ಮರಿ ನಾಲ್ಕು ಮೊಟ್ಟೆ ನುಂಗಿ ಅಸ್ವಸ್ಥಗೊಂಡು ಮನೆಯ ಪಕ್ಕದಲ್ಲಿ ಬಿದ್ದಿತ್ತು. ಈ ವೇಳೆ ಉರಗತಜ್ಞ ಆರೀಫ್ ಅವರು ಹಾವನ್ನು ರಕ್ಷಿಸಿದ್ದು, ಹಾವಿಗೆ ಚಿಕಿತ್ಸೆ ನೀಡುತ್ತಿದ್ದಂತೆ ಹಾವು ನಾಲ್ಕು ಮೊಟ್ಟೆಗಳನ್ನು ಕಕ್ಕಿದೆ.