ಓಮ್ನಿ ಕಾರಿಗೆ ಇನ್ನೋವಾ ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರ ದುರ್ಮರಣ…

277
firstsuddi

ಬೆಂಗಳೂರು: ಓಮ್ನಿ ಕಾರಿಗೆ  ಹಿಂದಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯ ದೊಡ್ಡ ಸೊನ್ನೆ ಗೇಟಿನ ಬಳಿ ನಡೆದಿದೆ. ಸ್ನೇಹಿತನ ಬರ್ತ್ ಡೇ ಪಾರ್ಟಿ ಮುಗಿಸಿ  ಓಮ್ನಿಯಲ್ಲಿ ನಂದಿಹಿಲ್ಸ್​ ರಸ್ತೆಯಲ್ಲಿ  ಹಿಂತಿರುಗುತ್ತಿದ್ದ  ವೇಳೆ  ಅಪಘಾತ ಸಂಭವಿಸಿದೆ.  ಅಪಘಾತದಲ್ಲಿ ಓಮ್ನಿಯಲ್ಲಿದ್ದ ಸುಂದರ್(25), ಸತೀಶ್(24), ವೆಂಕಟೇಶ್(28)​​, ವಿಕಾಸ್​​(23) ಮೃತಪಟ್ಟಿದ್ದು,  ಹೇಮಂತ್, ಅಜಿತ್ , ರವಿ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಐಎಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.