ಮೂಡಿಗೆರೆ : ತುಂಡಾಗಿ ನಿಂತ ವಿದ್ಯುತ್ ಕಂಬ ಬದಲಿಸಲು ನಿರ್ಲಕ್ಷ್ಯ; ಮೆಸ್ಕಾಂ ಅಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಶ…

196
firstsuddi

ಮೂಡಿಗೆರೆ:  ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಹಂಡುಗುಳಿ ಗಾಂದಿಘರ್ ರಸ್ತೆಯಲ್ಲಿ ಇರುವಂತಹ ಹಂಡುಗುಳಿ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ ಎದುರಿನಲ್ಲಿರುವಂತಹ ವಿದ್ಯುತ್ ಕಂಬವು ಹಲವು ತಿಂಗಳಿನಿಂದ ತುಂಡರಿಸಿ ಬೀಳುವ ಪರಿಸ್ಥಿತಿ ಇದ್ದರೂ ಇಂತಹ ಗಂಭೀರ ವಿಷಯವನ್ನು ಗಣನೆಗೆ ತೆಗೆದು ಕೊಳ್ಳದೇ ಮೆಸ್ಕಾಂನವರು ಕೇವಲ ಮೌನ ವಹಿಸುತ್ತಿರುವುದಕ್ಕೆ ಇಲ್ಲಿನ ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕೇವಲ ತಿಂಗಳಾದರೆ ಸಾಕು ಕೇವಲ ವಿದ್ಯುತ್ ಬಿಲ್ ವಸೂಲಿಗೆ ಇಲ್ಲಿನ ಮೆಸ್ಕಾಂಗೆ ಸಂಬಂಧಿಸಿದವರು ಬರುತ್ತಾರೆ ಅವರಲ್ಲಿಯೂ ಸಹ ಇಲ್ಲಿನ ಗ್ರಾಮಸ್ಥರು ಇಲ್ಲಿ ತುಂಡಾಗಿ ನೇತಾಡುತ್ತಿರುವ ವಿದ್ಯುತ್ ಕಂಬವನ್ನು ಬದಲಿಸುವ ಕುರಿತಂತೆ ಸಂಬಂಧಪಟ್ಟವರಲ್ಲಿ ತಿಳಿಸುವಂತೆ ಹಲವು ಭಾರಿ ಮನವರಿಕೆಯನ್ನು ಮಾಡಿದ್ದಾದರೂ ಇದರಿಂದ ಇಲ್ಲಿಯವರೆಗೆ ಯಾವುದೇ ಪ್ರಯೋಜನೆಯಾಗಲಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.
ವಿದ್ಯುತ್ ಕಂಬವು ತುಂಡಾಗಿ  ಹಲವು ತಿಂಗಳುಗಳೇ ಕಳೆದರು ಇದರ ಬಗ್ಗೆ ಮೆಸ್ಕಾಂನ ಅಧಿಕಾರಿಗಳಿಗೆ ಗೊತ್ತಿದ್ದರೂ ಅವರು ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಇದರ ಕಡೆ ಗಮನ ಹರಿಸದೇ ಅಪಘಾತದ ದಿನವನ್ನು ಕಾಯುತ್ತಿದ್ದಾರೆ ಇಲ್ಲಿಯೇ ಪಕ್ಕದಲ್ಲಿ ಸರ್ಕಾರಿ ಶಾಲೆಗೆ ಬರುವ ಮಕ್ಕಳು ಇದೇ ದಾರಿಯನ್ನು ಅವಲಂಬಿಸಿದ್ದು ಮತ್ತು ತೋಟದಲ್ಲಿ ದುಡಿಯುವ ಕೂಲಿ ಕಾರ್ಮಿಕರು ಇದೇ ದಾರಿಯಲ್ಲಿ ಪ್ರತಿದಿನ ನಡೆದು ಕೊಂಡು ಬರುತ್ತಿದ್ದು ವಿದ್ಯುತ್ ಕಂಬವು ತುಂಡಾಗಿ  ಮೈಮೇಲೆ ಬೀಳಬಹುದೇ ವಿದ್ಯುತ್ ಅಪಘಾತವಾಗಬಹುದೇ ಎಂದು ಪ್ರಾಣವನ್ನು ಕೈಯಲ್ಲಿ ಹಿಡಿದು ನಡೆಯುವ ಪರಿಸ್ಥಿತಿ ಉಂಟಾಗಿದೆ. 
ತುಂಡಾಗಿದ ವಿದ್ಯುತ್ ಕಂಬದ ಬದಲಿಗೆ ಇನ್ನೊಂದು ಹೊಸದಾದ ಕಂಬವನ್ನು ಅದರ ತಳದಲ್ಲಿ ಹಾಕಿ ಸುಮಾರು ತಿಂಗಳುಗಳೇ ಕಳೆದರೂ ಇದನ್ನು ಬದಲಿಸುವ ಯೋಚನೆಯೂ ಸಹ ಇಲ್ಲಿನ ಮೆಸ್ಕಾಂ ಅಧಿಕಾರಿಗಳಿಗೆ ಇಲ್ಲದಂತಾಗಿದೆ ಚುನಾವಣೆಯ ಒಸ್ತಿಲಲ್ಲಿ ಕೇವಲ ರಸ್ತೆಯ ಪ್ಯಾಚ್ ಅಥವಾ ಹೊಸದಾದ ರಸ್ತೆಗೆ ಒತ್ತು ಕೊಡುವ ಇಲ್ಲಿನ ಜನಪ್ರತಿನಿಧಿಗಳು ಇಂತಹ ಗಂಭೀರ ಪರಿಸ್ಥಿತಿಯನ್ನು ಯೋಚಿಸಿ ಗ್ರಾಮದಲ್ಲಾಗುವ ಅನಾನುಕೂಲದ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಇಲ್ಲಿನ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.