ಮೂಡಿಗೆರೆ: ಜನತೆಗೆ ಸಮಾಜ ಸೇವೆ ಮಾಡಬೇಕು ಅದಕ್ಕಾಗಿ ನಾನು ಏನು ಮಾಡಬೇಕು ಅದರ ಮುಂದಿನ ಯೋಜನೆಗಳೇನು ಇಂತಹ ಸೇವೆ ಮಾಡುವುದರಿಂದ ಸಮಾಜಕ್ಕೆ ನನ್ನಿಂದ ಏನು ಸಿಕ್ಕಿತು ಅದರಿಂದ ನಾನು ಪಡೆದ ತೃಪ್ತಿ ಎಷ್ಟು ಎಂಬಂತಹ ಲೆಕ್ಕಾಚಾರದಲ್ಲಿರುವಾಗ ಇಲ್ಲೊಬ್ಬ ಯುವ ಮುಖಂಡ ದೀಕ್ಷಿತ್ ಕಣಚೂರ್ ಕೈಗೊಂಡಿರುವ ನಿರ್ಧಾರ ಹಾಗೂ ಇವರ ಸಮಾಜ ಸೇವೆಯನ್ನು ಕಂಡು ಇಲ್ಲಿನ ಜನತೆ ಇವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದಲ್ಲದೇ ಅವರಿಗೊಂದು ಸಲಾಂ ಹೇಳಿದ್ದಾರೆ.
ಇಂದಿನ ದಿನಗಳಲ್ಲಿ ಸ್ವಾರ್ಥವೇ ಜಾಸ್ತಿಯಾಗಿರುವಾಗ ನಾನು ಮಾಡಿದ ಕೆಲಸ ಜನರಿಗೆ ತೋರಿಸಿಕೊಡಬೇಕು ಅದರಿಂದ ನನಗೆ ಶಹಬ್ಬಾಸ್ ಗಿರಿ ದೊರಕಬೇಕು ಎಂಬಂತಹ ಯೋಚನೆ ಇಂದಿನ ಕೆಲವರಿಗೆ ಇರುವಾಗ ಹಾಗೂ ಶ್ರೀಮಂತಿಕೆಯನ್ನು ಯಾವ ತರಹದಲ್ಲಿ ಮೆರೆಯಬೇಕು ಅದಕ್ಕೆ ಪೂರಕವೆಂಬಂತೆ ಶ್ರೀಮಂತರ ಸಹವಾಸವೇ ಮಾಡಿ ಅವರಿಗೆ ಸ್ಪಂಧಿಸಿ ಅವರ ಜೊತೆ ಒಡನಾಟದಲ್ಲಿದ್ದು ನನ್ನಿಂದ ಕೆಳಮಟ್ಟದವರೊಂದಿಗೆ ಸಹವಾಸವನ್ನು ಮಾಡಿದರೆ ನನ್ನ ಗೌರವಕ್ಕೆ ದಕ್ಕೆ ಬರುತ್ತದೆಯೋ ಎಂಬಂತಹ ಯೋಚನೆ ಕೆಲವರಲ್ಲಿ ಮೂಡಿದರೂ ಸಂದೇಹವಿಲ್ಲ ಆದರೆ ಇವರು ಮಾಡಲು ಹೊರಟಿರುವ ಸಮಾಜ ಸೇವೆ ಇವೆಲ್ಲಕ್ಕಿಂತ ಮಿಗಿಲಾಗಿದೆ ಎಂದರೆ ತಪ್ಪಾಗಲಾರದು.
ಸಮಾಜ ಸೇವೆ ಮಾಡುವಾಗ ತನ್ನ ಕೈಯಲ್ಲಾದ ಸಹಾಯ ಅಥವಾ ಧನ ಸಹಾಯ ಮಾಡುವುದು ಅನಾಥರನ್ನು ಗುರುತಿಸುವುದು ರೋಗಿಗಳಿಗೆ ನೆರವಾಗುವುದು ಅಪಘಾತವಾದಾಗ ಅವರ ಜೊತೆ ಇದ್ದು ಅವರೊಂದಿಗೆ ಸ್ಪಂದಿಸುವುದು ಇವೆಲ್ಲವನ್ನು ನಾವು ಕೇಳಿದ್ದೇವೆ ಆದರೆ ಇದೊಂದು ವಿಭಿನ್ನ ರೀತಿಯ ಸೇವೆಯಲ್ಲೊಂದಾದ ತನ್ನ ಆದಾಯದಲ್ಲಿ ದೊರಕಿದ ಒಂದು ಭಾಗವನ್ನು ಬಡವರಿಗೆ ಮೀಸಲಿರಿಸಿ ತನ್ನಲ್ಲಿರುವ ಟ್ರ್ಯಾಕ್ಟರಿನಲ್ಲಿ ಬಾಡಿಗೆ ಅವಶ್ಯಕತೆ ಇದ್ದವರಿಗೆ ಮನೆ ನಿರ್ಮಿಸುವವರಿಗೆ ಅಗತ್ಯ ಸಾಮಾಗ್ರಿಗಳನ್ನು ಕೊಂಡೊಯ್ಯಲು ಇಂದಿನ ಕಾಲದಲ್ಲಿ ವಾಹನದ ಬಾಡಿಗೆ ದುಬಾರಿಯಾಗಿರುವುದರಿಂದ ಬಡಜನರಿಗೆ ಸಾಮಾಗ್ರಿಕ್ಕಿಂತಲೂ ಬಾಡಿಗೆ ನೀಡುವ ಹಣ ಅಧಿಕವಾಗಿರುವುದರಿಂದ ಅಂತಹ ಬಡವರಿಗೆ ಅನುಕೂಲವಾಗಲೆಂದು ನಾನು ಈ ರೀತಿ ಸೇವೆ ಮಾಡಲು ನಿರ್ಧರಿಸಿದ್ದೇನೆ ಎಂದು ದೀಕ್ಷಿತ್ ಕಣಚೂರ್ ತಿಳಿಸಿದ್ದಾರೆ.
ಫಸ್ಟ್ಸುದ್ದಿ ಅವರನ್ನು ಮಾತನಾಡಿಸಿದಾಗ ಪ್ರತಿಕ್ರಯಿಸದ ಅವರು ನಾನು ಯಾವುದೇ ರಾಜಕೀಯ ಉದ್ದೇಶವನ್ನು ಇಟ್ಟುಕೊಂಡು ಈ ಕಾರ್ಯವನ್ನು ಕೈಗೊಂಡಿಲ್ಲ. ನಾನು ಕೂಡ ಬಡ ಕುಟುಂಬದಿಂದ ಬಂದಿದ್ದು ನನಗೆ ಬಡತನ ಏನೆಂಬುವುದು ಗೊತ್ತು. ಈಗಲು ಸಹ ನಾನು ಸರಳವಾದ ಜೀವನವನ್ನು ಮಾಡುತ್ತಿದ್ದೇನೆ ಇದರಿಂದ ಹಾಗೂ ಇಂತಹ ಸೇವೆಯನ್ನು ಮಾಡುವುದರಿಂದ ನನಗೆ ಸ್ವಲ್ಪಮಟ್ಟಿಗೆ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ಕೇವಲ ಪಟ್ಟಣದಲ್ಲಿನ 5 ಕಿ.ಮೀಟರ್ ವ್ಯಾಪ್ತಿಗೆ ಉಚಿತ ಟ್ರ್ಯಾಕ್ಟರ್ ಸೇವೆಯಲ್ಲದೇ ನೀರಿನ ಅಗತ್ಯತೆ ಈ ಬಿಸಿಲಿನಲ್ಲಿ ಜನರಿಗೆ ಸಾಮಾನ್ಯವಾಗಿದ್ದು ಇದರ ಅವಶ್ಯಕತೆ ಇದ್ದಲ್ಲಿ ಅದನ್ನು ಸಹ ಉಚಿತವಾಗಿ ನೀಡುತ್ತೇನೆ. ಸಾರ್ವಜನಿಕರು ಸೇವೆಗೆ ಮೊ.ನಂಬರ್9480117908 ಸಂಪರ್ಕಿಸಬಹುದು ಹಾಗೆಯೇ ಇದರ ನಿರ್ವಹಣೆಗೆ ತಗಲುವ ವೆಚ್ಚವನ್ನು ಟ್ರ್ಯಾಕ್ಟರಿನಿಂದ ಬಂದ ಬಾಡಿಗೆ ಹಣವನ್ನೇ ಭರಿಸುತ್ತೇನೆ ಎಂದರು.
ಇವರ ಇಂತಹ ಸೇವೆ ಸಾಮಾಜಿಕೆ ಜಾಲತಾಣದಲ್ಲಿ ಈಗಾಗಲೆ ಹರಿದಾಡತೊಡಗಿದ್ದು ಇಂತಹ ಸೇವೆ ಮಾಡುವವರಿಗೆ ಮೂಡಿಗೆರೆ ಸಾರ್ವಜನಿಕರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದು ಇದರ ಸದುಪಯೋಗಕ್ಕಾಗಿ ಅವಶ್ಯಕತೆ ಇರುವವರು ಮಾತ್ರ ಬಳಸಿದ್ದಲ್ಲಿ ಹಾಗೂ ಬಡವರಿಗೆ ದೊರಕಿದ್ದಲ್ಲಿ ಇದರಿಂದ ಕಷ್ಟದಲ್ಲಿ ಜನತಾ ಮನೆ ಸರ್ಕಾರದ ಆರ್ಥಿಕ ಧನ ಸಹಾಯದಲ್ಲಿ ಶೌಚಾಲಯ ಕಟ್ಟಿಸುವವರಿಗೆ ಹಾಗು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತದೆ ಆದರೆ ಇರುವಂತಹ ವ್ಯಕ್ತಿಗಳು ಇಂತಹ ಸೇವೆಯನ್ನು ದುರುಪಯೋಗಪಡಿಸದೇ ಇವರ ಜೊತೆ ಕೈ ಜೋಡಿಸಿ ನಾವು ಸಹ ಸಾಮಾಜಿಕ ಕೆಲಸದಲ್ಲಿ ತೊಡಗಿದರೆ ಇಂತಹ ಕಾರ್ಯ ಮಾಡುವವರಿಗೆ ನಮ್ಮಿಂದ ಬೆಂಬಲ ದೊರಕಿದಂತಾಗುತ್ತದೆ. ಇವರ ಸೇವೆಗೆ ಫಸ್ಟ್ಸುದ್ದಿ ಬಳಗ ಶ್ಲಾಘಿಸುತ್ತದೆ.










