ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ಪೂಜಾಗಾಂಧಿ ಅವರ ವಿರುದ್ಧ ಅಶೋಕ ಹೋಟೆಲ್ ಹೌಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೂಜಾಗಾಂಧಿ ಅವರು ಮೂರು ದಿನಕ್ಕೆ ಅಶೋಕ ಹೋಟೆಲ್ ನಲ್ಲಿ ರೂಂ ಪಡೆದಿದ್ದು, ಮೂರು ದಿನದಲ್ಲಿ 4.5 ಲಕ್ಷ ರೂ ಬಿಲ್ ಮಾಡಿ ಬಿಲ್ ಪಾವತಿಸದೇ ಪರಾರಿಯಾಗಿದ್ದಾರೆ ಎಂದು ಹೋಟೆಲ್ ಮಾಲೀಕರು ಅಶೋಕ ಹೋಟೆಲ್ ಹೌಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ಹಿನ್ನೆಲೆಯಲ್ಲಿ ಪೊಲೀಸರು ನಟಿ ವಿರುದ್ಧ ಎನ್‍ಸಿಆರ್ ದಾಖಲಿಸಿಕೊಂಡಿದ್ದು, ಪೂಜಾಗಾಂಧಿ ಅವರನ್ನು ಠಾಣೆಗೆ ಕರೆಸಿ ವಿಚಾರಿಸಿ ಪೊಲೀಸರ ಸಮ್ಮುಖದಲ್ಲಿ 2 ಲಕ್ಷ ರೂ.ಗಳನ್ನು ಕೊಟ್ಟು ಉಳಿದ ಹಣ ಕೊಡಲು ಪೂಜಾಗಾಂಧಿ ಅವರು ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.










