ಮೂಡಿಗೆರೆ :ಪ್ರವಾಸಕ್ಕೆ ಬಂದಿದ್ದ ಯುವಕ ಜಲಪಾತದಲ್ಲಿ ಆಯಾ ತಪ್ಪಿ ಬಿದ್ದು ಸಾವು…

290
firstsuddi

ಮೂಡಿಗೆರೆ :ಪ್ರವಾಸಕ್ಕೆ ಬಂದಿದ್ದ ಯುವಕ ಜಲಪಾತದಲ್ಲಿ ಈಜಲು ಹೋಗಿ ಆಯಾ ತಪ್ಪಿ ಬಿದ್ದು  ಸಾವನ್ನಪ್ಪಿರುವ ಘಟನೆ  ತಾಲೂಕಿನ ದುರ್ಗದ ಹಳ್ಳಿಯ ಜಲಪಾತದಲ್ಲಿ ನಡೆದಿದೆ. ಬೆಂಗಳೂರಿನ ಹಲಸೂರು ಮೂಲದ ಸುನೀಲ್(21) ಮೃತ ದುರ್ದೈವಿ.  ಸುನೀಲ್ 12 ಜನ ಸ್ನೇಹಿತರೊಂದಿಗೆ  ಪ್ರವಾಸಕ್ಕೆ ಬಂದಿದ್ದು, ದುರ್ಗದ ಹಳ್ಳಿಯ ಹೋಮ್ ಸ್ಟೇ ನಲ್ಲಿ ಸುನೀಲ್ ಹಾಗೂ ಸ್ನೇಹಿತರು  ತಂಗಿದ್ದರು.   ದುರ್ಗದ ಹಳ್ಳಿಯ ಜಲಪಾತದಲ್ಲಿ   ಈಜಲು ಹೋದಾಗ ಆಯಾ ತಪ್ಪಿ ಬಿದ್ದು  ಸುನಿಲ್ ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲನೆ ನಡೆಸುತ್ತಿದ್ದು,  ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  .