ಮುಖ್ಯಮಂತ್ರಿಗಳ ನೂತನ ಮಾಧ್ಯಮ ಸಲಹೆಗಾರರಾಗಿ ಎನ್. ಭೃಂಗೀಶ್ ನೇಮಕ…

106
firstsuddi

ಬೆಂಗಳೂರು : ಮುಖ್ಯಮಂತ್ರಿಗಳ ನೂತನ ಮಾಧ್ಯಮ ಸಲಹೆಗಾರರಾಗಿ ಎನ್. ಭೃಂಗೀಶ್ ಅವರನ್ನು ನೇಮಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮಹಾದೇವ್ ಪ್ರಕಾಶ್ ಅವರು ಮಾಧ್ಯಮ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ವಾರ್ತಾ ಇಲಾಖೆ ನಿವೃತ ನಿರ್ದೇಶಕ ಎನ್. ಭೃಂಗೀಶ್ ಅವರನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿಗಳು ರಾಜ್ಯ ಶಿಷ್ಟಾಚಾರ ಇಲಾಖೆಗೆ ಸೂಚನೆ ನೀಡಿದ್ದರು. ಅದರಂತೆ ಇಂದು ಎನ್.ಭೃಂಗೀಶ್ ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಿ ಶಿಷ್ಟಾಚಾರ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.