ತಂದೆ ಹಾಗೂ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣದ ನಾರಾಯಣಸ್ವಾಮಿ.

279
firstsuddi

ತುಮಕೂರು- ಕುಣಿಗಲ್ ತಾಲೂಕಿನ ಕಾಂತಯ್ಯನಪಾಳ್ಯದ ನಿವಾಸಿ ನಾರಾಯಣಸ್ವಾಮಿ ಹಾಗೂ ಸೌಮ್ಯ ದಂಪತಿಗೆ ಮೂರು ವರ್ಷದ ಕೀರ್ತನಾ ಎಂಬ ಮಗಳಿದ್ದು, ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ನಾರಾಯಣಸ್ವಾಮಿ ಎದ್ದು ಒನಕೆಯಿಂದ ಮಲಗಿದ್ದ ತಂದೆ ಈರಣ್ಣ (70) ಹಾಗೂ ಸೌಮ್ಯ (24) ಪತ್ನಿಯ ತಲೆಗೆ ಹೊಡೆದು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದು, ನಂತರ ಶಿರಾ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ .ಬೆಳಗಿನ ಜಾವ ಮಗು ಜೋರಾಗಿ ಅಳುವುದನ್ನು ಕಂಡ ಅಕ್ಕಪಕ್ಕದವರು ಬಂದು ನೋಡಿದಾಗ ಇಬ್ಬರು ಕೊಲೆಯಾಗಿರುವುದು ಕಂಡು ಬಂದಿದೆ. ಕಳೆದ ಎರಡು ತಿಂಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು ಪತ್ನಿ ಮೇಲೆ ಶಂಕೆ ವ್ಯಕ್ತಪಡಿಸಿ ಪತ್ನಿಯೊಂದಿಗೂ ಜಗಳವಾಡುತ್ತಿದ್ದ ಎನ್ನಲಾಗಿದೆ. ಆದರೆ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ನಾರಾಯಣಸ್ವಾಮಿ ಬಾಯಿಬಿಟ್ಟಿಲ್ಲ. ಹಾಗೂ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.