ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ಒಂದೊತ್ತು ಊಟ ಬೇಕಾದರೂ ಬಿಟ್ಟಿರುತ್ತಾರೆ ಆದರೆ ಒಂದು ಘಳಿಗೆ ಮೊಬೈಲ್ ಬಿಟ್ಟಿರುವುದಿಲ್ಲ. ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಈ ಮೊಬೈಲ್ ಯಾವ ರೀತಿ ಪ್ರಭಾವ ಬೀರಿದೆ ಎಂಬುದಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಅವರು ಟ್ವಿಟ್ ಮಾಡಿದ್ದಾರೆ. ನಮ್ಮದೇಶಕ್ಕೆ ಬಂದ ಹೊಸಕಾಯಿಲೆ ಮೊಬೈಲ್ ರೋಗ. ಬಂಧು ಬಾಂಧವರು ಸ್ನೇಹಿತರು ಪಕ್ಕದಲ್ಲೆ ಇದ್ದರು ಸತ್ತವರಂತೆ ಭಾವಿಸಿ ಮೊಬೈಲಲ್ಲಿ ತಲ್ಲಿನರೋಗ. ಈ ರೋಗಕ್ಕೆ ಮದ್ಧು ಕಂಡುಹಿಡಿಯದಿದ್ದರೆ ಮಾನವರು ಏಕಾಂಗಿ ಎಂಬ ರೋಗದಿಂದ ಸಾವನ್ನಪ್ಪುತ್ತಾರೆ. ದಯಮಾಡಿ ಬೇಗ ಈ ರೋಗಕ್ಕೆ ಔಷಧಿಕಂಡು ಹಿಡಿದು ಈ ರೋಗದಿಂದ ಜನರನ್ನ ಉಳಿಸಬೇಕು ಎಂದು ದೇವರಲ್ಲಿ ಪ್ರಾರ್ಥನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.











