ಅಮೇರಿಕಾದಲ್ಲಿ ದ್ವೀಪವೊಂದನ್ನು ಖರೀದಿಸಿ ಪ್ರತ್ಯೇಕ ದೇಶವನ್ನೇ ನಿರ್ಮಿಸಿದ ನಿತ್ಯಾನಂದ ಸ್ವಾಮಿ…!

542

ಬೆಂಗಳೂರು : ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿವಾಧಿತ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಅಮೆರಿಕಾದಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿ ಅಲ್ಲಿ ಹೊಸ ದೇಶವನ್ನೇ ನಿರ್ಮಿಸಲು ಮುಂದಾಗಿದ್ದಾರೆ. ನಿತ್ಯಾನಂದ ಈಗಾ ದಕ್ಷಿಣ ಅಮೆರಿಕಾದ ಈಕ್ವೆಡಾರ್‍ನಲ್ಲಿ ಖಾಸಗಿ ದ್ವೀಪವನ್ನು ಖರೀದಿಸಿ ಅದನ್ನು ತನ್ನ ದೇಶ ಎಂದು ಬಿಂಬಿಸುತ್ತಿದ್ದಾರೆ ಎಂದು ವರದಿಯಾಗಿದ್ದು, ಅಲ್ಲದೇ ಈ ದ್ವೀಪಕ್ಕೆ ಈಗಾಗಲೆ ಒಂದು ಪ್ರತ್ಯೇಕ ಧ್ವಜ, ಲಾಂಛನ, ಪಾಸ್‍ಪೋರ್ಟ್‍ಗಳನ್ನು ಕೂಡಾ ಸಿದ್ದಪಡಿಸಿ ಈ ದೇಶಕ್ಕೆ ಕೈಲಾಸ ಎಂಬ ಹೆಸರನ್ನು ಇಟ್ಟಿದ್ದಾರೆ. ಅಲ್ಲದೇ ಈ ದ್ವೀಪವನ್ನು ಹಿಂದೂ ಸಾರ್ವಭೌಮ ದೇಶ ಎಂದು ಸ್ವಯಂ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ www.kalilaasa.org ಎಂಬ ವೆಬ್‍ಸೈಟ್‍ನ್ನು ತೆರೆದಿದ್ದು, ಅದರಲ್ಲಿ ಕೈಲಾಸದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಕೈಲಾಸ ಎಂಬುವುದು ರಾಜಕೀಯೇತರ ದೇಶವಾಗಿದೆ. ಕೈಲಾಸದ ಆಂದೋಲನವು ಯುನೈಟೆಡ್ ಸ್ಟೇಟ್‍ನಲ್ಲಿ ಸ್ಥಾಪಿತವಾಗಿದ್ದು, ಇದು ಹಿಂದೂ ಆದಿ ಶೈವ ಅಲ್ಪ ಸಂಖ್ಯಾತರ ಸಮುದಾಯದ ಸದಸ್ಯರ ನೇತೃತ್ವದಲ್ಲಿ ರಚಿಸಲಾಗಿದೆ. ಹಾಗೂ ಇಲ್ಲಿ ಎಲ್ಲಾ ಜನಾಂಗ, ಪಂಥ, ಜಾತಿ-ಧರ್ಮದವರು ಶಾಂತಿಯುತವಾಗಿ ಬದುಕಬಹುದು ಎಂದು ಬರೆದುಕೊಂಡಿದ್ದಾರೆ.
ನಿತ್ಯಾನಂದ ಈ ದೇಶಕ್ಕೆ ಸೂಚಿಸಿರುವ ಧ್ವಜ ಮೆರೂನ್ ಬಣ್ಣದ್ದಾಗಿದ್ದು, ಅದರಲ್ಲಿ 2 ಲಾಂಛನಗಳು ಇವೆ. ಒಂದು ನಿತ್ಯಾನಂದ ಸ್ವಾಮಿ ಇನ್ನೊಂದು ನಂದಿಯ ಚಿತ್ರವಾಗಿದೆ. 2 ಮಾದರಿಯಲ್ಲಿ ಪಾಸ್‍ಪೋರ್ಟ್ ನ್ನು ಅಂತಿಮಗೊಳಿಸಿದ್ದು, ಒಂದು ಬಂಗಾರದ ಬಣ್ಣವಾಗಿದ್ದು, ಇನ್ನೊಂದು ಕೆಂಪು ಬಣ್ಣದ್ದಾಗಿದೆ. ಅಲ್ಲದೇ ನಿತ್ಯಾನಂದ ಕೈಲಾಸದಲ್ಲಿ ಸಚಿವ ಸಂಪುಟವನ್ನು ರಚಿಸಿದ್ದು, ಮಾ ಎಂಬ ಹೆಸರಿನ ವ್ಯಕ್ತಿಯನ್ನು ದೇಶಕ್ಕೆ ಪ್ರಧಾನಿಯಾಗಿ ಆಯ್ಕೆ ಮಾಡಿದ್ದು, ಪ್ರತಿದಿನ ಸಚಿವ ಸಂಪುಟ ಸಭೆಯನ್ನು ನಡೆಸುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.