ಕೊಟ್ಟಿಗೆಹಾರ : ಹಸಿರು ಬಣ್ಣದ ಕಾಫಿ ಗಿಡದ ಎಲೆಗಳನ್ನು ನೋಡಿದ್ದೀವಿ, ಆದರೆ ತಾಲ್ಲೂಕಿನ ಬಡವನದಿಣ್ಣೆ ಗ್ರಾಮದ ರವಿ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಒಂದು ರೋಬಸ್ಟಾ ಕಾಫಿ ಗಿಡದಲ್ಲಿ ಬಿಳಿ ಎಲೆಗಳು ಬಂದಿರುವುದು ಸ್ಥಳೀಯ ಕಾಫಿ ಬೆಳೆಗಾರರ ಅಚ್ಚರಿಗೆ ಕಾರಣವಾಗಿದೆ. ಈ ರೋಬಸ್ಟಾ ಗಿಡದ ಎಲ್ಲಾ ಕೊಂಬೆಗಳಲ್ಲೂ ಹಸಿರು ಎಲೆಗಳಿದ್ದು, ಒಂದು ಕೊಂಬೆಯಲ್ಲಿ ಬಿಳಿ ಎಲೆ ಬಿಟ್ಟಿದ್ದು, ಈ ಬಗ್ಗೆ ಕೃಷಿ ವಿಜ್ಞಾನಿ ಗಿರೀಶ್ ಮಾತನಾಡಿ ಈ ಗಿಡಕ್ಕೆ ಪೌಷ್ಠಿಕಾಂಶದ ಕೊರತೆಯಿಂದ ಎಲೆಗಳು ಬಿಳಿ ಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಭತ್ತ ಮತ್ತು ಅಡಿಕೆ ಗಿಡಗಳು ಪೌಷ್ಠಿಕಾಂಶದ ಕೊರತೆಯಿಂದ ಎಲೆಗಳು ಬಣ್ಣ ಬದಲಾಯಿಸುವುದು ಸಾಮಾನ್ಯ. ಅದೇ ರೀತಿ ಕಾಫಿ ಗಿಡವೂ ಪೌಷ್ಠಿಕಾಂಶದ ಕೊರತೆಯಿಂದ ಈ ರೀತಿ ಆಗಿದೆ ಎಂದು ತಿಳಿಸಿದರು.










