ಕೊರೊನಾ ಲಸಿಕೆಗಾಗಿ ಹೆಚ್ಚು ಕಾಯುವ ಅವಶ್ಯಕತೆ ಇಲ್ಲ : ನರೇಂದ್ರ ಮೋದಿ.

144
firstsuddi

ನವದೆಹಲಿ : ಕೊರೊನಾ ವ್ಯಾಕ್ಸಿನ್ ಗಾಗಿ ಬಹಳ ವಾರ ಕಾಯುವ ಅಗತ್ಯವಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇಂದು ನಡೆದ ಸರ್ವಪಕ್ಷಗಳ ನಡುವೆ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಂಟು ಲಸಿಕೆಗಳು ಹಲವು ಹಂತದ ಪ್ರಯೋಗದಲ್ಲಿದೆ. ಅವುಗಳ ಉತ್ಪಾದನಾ ಭರವಸೆ ಭಾರತದಲ್ಲಿ ಇದೆ. ಕೊರೊನಾ ಲಸಿಕೆಗಾಗಿ ಹೆಚ್ಚು ಕಾಯುವ ಅವಶ್ಯಕತೆ ಇಲ್ಲ. ಇನ್ನೂ ಕೆಲವೇ ವಾರಗಳಲ್ಲಿ ಲಭ್ಯವಾಗಬಹುದು. ಲಸಿಕೆ ವಿತರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಂಡ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ವಿಜ್ಞಾನಿಗಳು ಕೊರೊನಾ ಲಸಿಕೆ ತಯಾರಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಗ್ಗದ ಮತ್ತು ಸುರಕ್ಷಿತ ಲಸಿಕೆ ಬಗ್ಗೆ ಜಗತ್ತು ನಿಗಾ ವಹಿಸುತ್ತಿದೆ. ಹಾಗಾಗಿಯೇ ವಿಶ್ವವೇ ಭಾರತವನ್ನು ನೋಡುತ್ತಿದೆ. ವ್ಯಾಕ್ಸಿನೇಷನ್ ವೇಳೆ ರಾಷ್ಟ್ರ ವಿರೋಧಿ ಹಾಗೂ ಮಾನವ ವಿರೋಧಿ ವದಂತಿಗಳು ಹರಡದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.