ಮೈಸೂರು ದಸರಾ ಉದ್ಘಾಟನೆಗೆ ಇನ್ಫೋಸಿಸ್ ಸುಧಾಮೂರ್ತಿ ಅವರಿಗೆ ಅಧಿಕೃತ ಆಹ್ವಾನ…

289
firstsuddi

ಬೆಂಗಳೂರು: ಮೈಸೂರು ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿದ್ದು, ಇನ್ಫೋಸಿಸ್ ಸಂಸ್ಥಾಪಕರಾದ ಸುಧಾಮೂರ್ತಿ ಅವರಿಂದ ಈ ಭಾರಿಯ ದಸರಾ ಉದ್ಘಾಟನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಸುಧಾಮೂರ್ತಿ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ್ದು, ಮೈಸೂರು ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಸಚಿವ ಸಾ.ರಾ.ಮಹೇಶ್, ಶಾಸಕ ರಾಮದಾಸ್, ಎಚ್.ವಿಶ್ವನಾಥ್ ಸುಧಾಮೂರ್ತಿಯವರಿಗೆ ಮೈಸೂರು ಪೇಟ, ರೇಷ್ಮೆ ಶಾಲು ಹಾಗೂ ಹೂವಿನ ಹಾರ ಹಾಕಿ ಗೌರವಿಸಿ ದಸರಾ ಹಬ್ಬ ಉದ್ಘಾಟಕರಾಗಿ ಅಧಿಕೃತ ಆಮಂತ್ರಣ ನೀಡಿದ್ದಾರೆ.