ಮೂಡಿಗೆರೆ: ವಿಧಾನಸಭೆ ಚುನಾವಣೆಯಾಗಿ ಸರ್ಕಾರ ರಚನೆಯಾಗಿ ಐದು ತಿಂಗಳಾದರೂ ತಾಲೂಕಿನ ವಿಧಾನಸಭಾ ಕ್ಷೇತ್ರ ಚುನಾವಣಾ ವೇಳೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವಾಹನಗಳ ಮಾಲಿಕರಿಗೆ ಇನ್ನೂ ಕೂಡ ವಾಹನಗಳ ಬಾಡಿಗೆ ಹಣ ಬಂದಿಲ್ಲ. ಸುಮಾರು ಹತ್ತು ಲಕ್ಷ ಹಣ ಬಾಡಿಗೆ ನೀಡಬೇಕಿದ್ದ ಜಿಲ್ಲಾಡಳಿತ ಇಲ್ಲಿಯ ವರೆಗೆ ವಾಹನಗಳ ಬಾಡಿಗೆಯನ್ನು ನೀಡಿಲ್ಲ. ಹಣಕ್ಕಾಗಿ ತಾಲೂಕು ಕಚೇರಿಗೆ ಅಲೆದು ಅಲೆದು ವಾಹನದ ಚಾಲಕರು ಹಾಗೂ ಮಾಲೀಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.









