ಮೂಡಿಗೆರೆ: ಬೆಂಗಳೂರಿನಿಂದ ಹೊರನಾಡಿಗೆ ತೆರಳುತ್ತಿದ್ದ ಓಮಿನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟದೊಳಗಿನ ಹತ್ತು ಅಡಿ ಆಳದ ಪ್ರಪಾತಕ್ಕೆ ಪಲ್ಟಿಯಾಗಿರೋ ಘಟನೆ ತಾಲೂಕಿನ ಜಾವಳಿ ಸಮೀಪ ನಡೆದಿದ್ದು, ಓಮಿನಿಯಲ್ಲಿ ಐವರು ಪ್ರಯಾಣ ಮಾಡುತ್ತಿದ್ದು, ಮೂವರಿಗೆ ಕೈ ಮುರಿದಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಿಯರ ನೆರವಿನಿಂದ ಐವರಿಗೂ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ವಾಪಸ್ ಕಳಿಸಿದ್ದಾರೆ.









