ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರಿಂದಲೇ ಶೋಭ ಕರಂದ್ಲಾಜೆ ವಿರುದ್ಧ ಆಕ್ರೋಶ…

749
firstsuddi

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣಗಳಲ್ಲಿ “ಗೋ ಬ್ಯಾಕ್ ಶೋಭಕ್ಕ ಚಳುವಳಿ” ಚಿಕ್ಕಮಗಳೂರಿನಲ್ಲೂ ಆರಂಭವಾಗಿದ್ದು, ಬಿಜೆಪಿ ಕಾರ್ಯಕರ್ತರೇ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಐದು ವರ್ಷದಿಂದ ನಾಪತ್ತೆಯಾಗಿ ಈಗ ಮತ್ತೆ ಮೋದಿ ಹೆಸರಲ್ಲಿ ಗೆಲ್ಲಲು ಬಂದಿದ್ದಿರಾ. ಈಗ ಮತ್ತೆ ನಿಮಗೆ ಕ್ಷೇತ್ರ ನೆನಪಾಯ್ತಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಶೋಭಾ ಕರಂದ್ಲಾಜೆ ಅವರು ತರೀಕೆರೆಯಲ್ಲಿ ಭಾಷಣ ಮಾಡುತ್ತಿರುವ ಫೋಟೋ ವನ್ನು ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಿದ್ದಕ್ಕೆ  ಆಕ್ರೋಶ ವ್ಯಕ್ತವಾಗಿದೆ.