ಮೂಡಿಗೆರೆ : ಕಾರಿನ ತುಂಬಾ ಭಾರತದ ಬಾವುಟ ಹಾಗೂ ಸೈನಿಕರ ಫೋಟೋ ಹಾಕೋಂಡು ತನ್ನ ಸ್ವಂತ ಕಾರಿನಲ್ಲಿ ರಿವರ್ಸ್ ಗೇರ್ನಲ್ಲೇ ದೇಶದ ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸ್ತಿರೋ ಅಪರೂಪದ ವ್ಯಕ್ತಿ ಕಾಫಿನಾಡಿಗೆ ಬಂದು ದೇಶದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಹಾರಾಷ್ಟ್ರದ ಪುಣೆ ಮೂಲದ ಕಾರ್ ಮ್ಯಾಕಾನಿಕ ಸಂತೋಷ್ ಎಂಬ ವ್ಯಕ್ತಿಯೇ ದೇಶದ ಅಭಿವೃದ್ಧಿ ಬಗ್ಗೆ ರಿವರ್ಸ್ ಗೇರ್‍ನಲ್ಲಿ ದೇಶ ಸುತ್ತುತ್ತಿರೋ ವ್ಯಕ್ತಿ. ಈಗಾಗ್ಲೇ ರಾಜ್ಯಗಳನ್ನ ಸುತ್ತಿರೋ ಸಂತೋಷ್ 15 ಸಾವಿರಕ್ಕೂ ಅಧಿಕ ಕಿ.ಮೀ. ರಿವರ್ಸ್ ಗೇರ್‍ನಲ್ಲೇ ದೇಶ ಸುತ್ತಿ, ಚಿಕ್ಕಮಗಳೂರಿನ ಕೊಟ್ಟಿಗೆಹಾರ ಮೂಲಕ ಕೇರಳ ಹಾಗೂ ಗೋವಾದತ್ತ ಪ್ರಯಾಣ ಬೆಳೆಸಿದ್ದಾರೆ.
ಸಂತೋಷ್‍ನ ರಕ್ಷಣೆಗಾಗಿ ಆತನ ಸ್ನೇಹಿತ ರವಿ ಕೂಡ ಬುಲೆಟ್‍ನಲ್ಲಿ ಅವರ ಜೊತೆ ದೇಶ ಸುತ್ತಿದ್ದಾರೆ. ದಿನಕ್ಕೆ 250 ರಿಂದ 300 ಕಿ.ಮೀ. ಡ್ರೈವ್ ಮಾಡ್ತಿರೋ ಸಂತೋಷ್ ರಿವರ್ಸ್ ಗೇರ್‍ನಲ್ಲಿ ಜಾಥಾ ಮಾಡ್ತಾ ಜಾಗೃತಿ ಮೂಡ್ಸೋದಕ್ಕೂ ಒಂದು ಕಾರಣವಿದೆ. ಕಾರು ರಿವರ್ಸ್ ಹೋಗ್ತಿರುವಂತೆ ದೇಶ ಕೂಡ ರಿವರ್ಸ್ ಹೋಗ್ತಿದೆ. ಸುಮ್ಮನೆ ಜಾಗೃತಿ ಮೂಡಿಸಿದ್ರೆ ಜನಕ್ಕೆ ಅರ್ಥವಾಗೋದಿಲ್ಲ. ಕಾರು ರಿವರ್ಸ್ ಹೋದ್ರೆ ಕುತೂಹಲಕ್ಕಾದ್ರು ವಿಚಾರಿಸಿ ಬದಲಾಗ್ತಾರೆ ಅನ್ನೋದು ಸಂತೋಷ್ ನಂಬಿಕೆ. ಮೋದಿಯ ಸ್ವಚ್ಛತ ಆಂದೋಲನ ಸರಿಯಾಗಿ ಜಾರಿಗೆ ಬರಬೇಕು. ಜನ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು. ಚೈನಾ ವಸ್ತುಗಳನ್ನ ಖರೀದಿಸುವ ಮೂಲಕ ದೇಶವನ್ನ ಹಾಳು ಮಾಡ್ತಿದ್ದೇವೆ ಎಲ್ಲರೂ ದೇಶಿ ವಸ್ತುಗಳನ್ನೇ ಖರೀದಿ ಮಾಡ್ಬೇಕು ಎಂದು ಜಾಗೃತಿ ಮೂಡಿಸ್ತಿದ್ದಾರೆ. ಇವ್ರ ಕಾರ್ಯಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










