ಚಿಕ್ಕಮಗಳೂರು : ನಗರದ ದೇವಾಂಗ ಸಂಘ, ಎಂ.ಜಿ. ರಸ್ತೆ ಕ್ರಾಸ್ ಆಂಜನೇಯಸ್ವಾಮಿ ದೇವಸ್ಥಾನದ ವತಿಯಿಂದ ಶ್ರೀ ಬನಶಂಕರಿ ಅಮ್ಮನವರ ಉತ್ಸವ ಮತ್ತು 28ನೇ ವರ್ಷದ ದೇವಾಲಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇಂದು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಬನದ ಹುಣ್ಣಿಮೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ನಡೆಸಲಾಯಿತು. ಬೆಳಗ್ಗೆ 7-30 ಕ್ಕೆ ಕುಲದೇವತಾ ಪ್ರಾರ್ಥನೆ ನಂತರ ಪುಣ್ಯಾಹ, ಶ್ರೀ ಗಣಪತಿ ಪೂಜೆ, ಶ್ರೀ ಬನಶಂಕರಿ ಮೂಲ ಮಂತ್ರ ಹೋಮ ಮಧ್ಯಾಹ್ನ 11 ಗಂಟೆಗೆ ಪೂರ್ಣಾಹುತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ 12-30 ರಿಂದ ಅನ್ನಸಂತಾರ್ಪಣೆ ಕಾರ್ಯಕ್ರಮಗಳು ನಡೆದವು.
ಅಲ್ಲದೆ ಮಹೋತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಕೂಡ ನಡೆದವು. ಜಾತ್ರೆಯ ಬಗ್ಗೆ ಮಾತನಾಡಿದ’ಸಂಘದ ಅಧ್ಯಕ್ಷರಾದ ಭಗವತಿ ಹರೀಶ್ ಅವರು ಪ್ರತಿ ವರ್ಷ ಬನದ ಹುಣ್ಣಿಮೆ ಜಾತ್ರೆಯಲ್ಲಿ ಈ ದೇವಾಲಯದಲ್ಲಿ ಬನಶಂಕರಿ ಅಮ್ಮನವರ ಜಾತ್ರೆ ಹಾಗೂ ವಿಶೇಷ ಪೂಜೆ ಹೋಮದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಯುತ್ತವೆ. ಅಪಾರ ಸಂಖ್ಯೆಯಲ್ಲಿ ಬೆಳಗ್ಗಿನಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಇಲಿನ ವಿಗ್ರಹಗಳಿಗೆ ವಿವಿಧ ಬಗೆಯ ಹೂ ಗಳಿಂದ ಅಲಂಕಾರಗೊಳಿಸಿ ಸಂಜೆ ಮೆರವಣಿಗೆ ನಡೆಸಲಾಗುತ್ತದೆ. ಎಲ್ಲಾ ಕಾರ್ಯಕ್ರಗಳಲ್ಲೂ ದೇವಾಂಗ ಸಮಾಜದ ಮುಖಂಡರು ಸದಸ್ಯರು ಪ್ರತಿಯೊಬ್ಬರು ಕೂಡ ತನು ಮನ ದಿಂದ ದೇವಾಲಯದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿ ದೇವರ ಉತ್ಸವ ಯಶಸ್ವಿಗೊಳಿಸುತ್ತಾರೆ ಎಂದು ನುಡಿದರು. ಕಾರ್ಯದರ್ಶಿ ತ್ಯಾಗರಾಜ್, ಸಹ ಕಾರ್ಯದರ್ಶಿ ಸಿ.ಟಿ ಜೀತೇಂದ್ರ ಇವರುಗಳು ಉತ್ಸವದ ಕುರಿತು ಮಾತನಾಡಿದರು. ಉಪಾಧ್ಯಕ್ಷ ಸಿ.ಎಸ್ ರವಿ ಕುಮಾರ್. ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಸಹ ಕಾರ್ಯದರ್ಶಿ ಸಿ.ಟಿ ಜೀತೇಂದ್ರ, ಲೋಹಿತ್ ಖಜಾಂಚಿ ಜೆ.ಎಸ್, ರವಿಶಂಕರ್.ಸದಸ್ಯರಾದ ಗೌರೀಶ್ ಹಾಗು ನಿರ್ಧೇಶಕರುಗಳು, ಸಲಹೆಗಾರರು, ಸದಸ್ಯರು, ಮಹಿಳಾ ಸಂಘದ ಸದಸ್ಯರು. ಭಕ್ತರು ಉಪಸ್ಥಿತರಿದ್ದರು.










