ಚಿಕ್ಕಮಗಳೂರು : ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯ ಹಿನ್ನೆಲೆ ರಂಭಾಪುರಿ ಶ್ರೀಗಳು ತೀವ್ರ ಸಂತಾಪ ಸೂಚಿಸಿದ್ದು, ಸಿದ್ದಗಂಗಾ ಶ್ರೀಗಳು ಲಿಂಗೈಕ್ಯ ವಿಚಾರ ತಿಳಿದು ಅತ್ಯಂತ ವಿಷಾದವಾಯಿತು. ಮೊನ್ನೆಯಷ್ಟೇ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದೆ. ಶ್ರೀಗಳ ಭೇಟಿ ಮಾಡಿದ್ದ ನೆನಪು ಇನ್ನೂ ಕೂಡ ಮರೆಯಲು ಸಾಧ್ಯವಿಲ್ಲ. ಶ್ರೀಗಳು 111ವರ್ಷ ಬಾಳಿ ಬದುಕಿದ್ದು ದಾಖಲೆ. ನಿಯಮಿತವಾದ ಜೀವನ ಪದ್ಧತಿ,ಅನುಸರಿಸಿಕೊಂಡು ಬಂದ ಪೂಜಾ ವಿಧಾನಗಳು,ಎಲ್ಲ ವರ್ಗದವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ಈ ಕಾರಣದಿಂದಾಗಿ ಶ್ರೀಗಳು ದೀರ್ಘಯುಷಿಗಳಾಗಿದ್ದರು. ದಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಶ್ರೀಗಳು ಅಗಲಿದ್ದು ಈ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದೆ. ಭಗವಂತ ಅಗಲಿದ ಶ್ರೀಗಳ ಪವಿತ್ರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಶ್ರೀ ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ಸೂಚಿಸಿದ್ದಾರೆ.









