ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕಾದ ಖ್ಯಾತ ಗಾಯಕ ನಿಕ್ ಜೋನಸ್ ವಿವಾಹ ಜೋಧ್ ಪುರದ ಭವ್ಯ ಅರಮನೆಯಲ್ಲಿ ಡಿಸೆಂಬರ್ 1 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ, ಡಿಸೆಂಬರ್ 2 ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ ಪ್ರಿಯಾಂಕ ಚೋಪ್ರ ಮತ್ತು ನಿಕ್ ಜೊನಸ್ ಅವರ ಆರತಕ್ಷತೆಯನ್ನು ನಿನ್ನೆ ದೆಹಲಿಯ ಹೊಟೆಲ್ ತಾಜ್ ಪ್ಯಾಲೇಸ್ ನಲ್ಲಿ ಆಚರಿಸಿಕೊಂಡಿದ್ದಾರೆ.ಈ ವೇಳೆ ಆರತಕ್ಷತೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ನವ ದಂಪತಿಗೆ ಶುಭ ಹಾರೈಸಿದ್ದಾರೆ.










