ಕೋಟೆನಾಡಿಗೆ ಭೇಟಿ ನೀಡಿ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ ಅವರ ಪತ್ನಿ ಜಶೋಧ ಬೆನ್…

213
firstsuddi

ಚಿತ್ರದುರ್ಗ : ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋಧ ಬೆನ್ ಅವರು ಕೋಟೆನಾಡಿಗೆ ಭೇಟಿ ನೀಡಿದ್ದು, ನಗರದ ನೀಲಕಂಠೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಶಿಚಮೊಗ್ಗದ ರಾಮಚಂದ್ರಾಪುರ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ ಜಶೋಧ ಬೆನ್ ಅವರು ಇಂದು ಬೆಳಿಗ್ಗೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದು, ಕೋಟೆನಾಡಿನ ಜನತೆ ಜಶೋಧ ಬೆನ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಬಳಿಕ ನಗರದ ನೀಲಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಶಿವಮೊಗ್ಗದ ರಾಮಚಂದ್ರಾಪುರ ಮಠದತ್ತ ಪ್ರಯಾಣ ಬೆಳೆಸಿದರು.