ಕುಂದಾಪುರದಲ್ಲಿ ಪಾಕಿಸ್ತಾನ ಪರ ಘೋಷಣೆ–ರಾಘವೇಂದ್ರ ವಿರುದ್ದ ದೇಶದ್ರೋಹ ಪ್ರಕರಣ ದಾಖಲು–ಎಎಸ್ಪಿ ಕುಮಾರಚಂದ್ರ

219
firstsuddi

ಉಡುಪಿ: ಮಿನಿ ವಿಧಾನಸೌಧದೊಳಗೆ ಪಾಕ್ ಪರ ಘೋಷಣೆ ಕೂಗಿದ್ದ ರಾಘವೇಂದ್ರ ಗಾಣಿಗನ ವಿರುದ್ದ ದೇಶದ್ರೋಹ ಪ್ರಕರಣ ದಾಖಲಾಗಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಹೇಳಿದ್ದಾರೆ. ಇಂದು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕುಂದಾಪುರದ ಮಿನಿ ವಿಧಾನಸೌಧದೊಳಗೆ ಪಾಕ್ ಪರ ಘೋಷಣೆ ಕೂಗಿದ್ದರ ಕುರಿತು ರಾಘವೇಂದ್ರನ ವಿರುದ್ದ ಕುಂದಾಪುರ ತಹಶಿಲ್ದಾರರರು ದೂರು ನೀಡಿದ್ದಾರೆ. ಅವರ ದೂರಿನಂತೆ ರಾಘವೆಂದ್ರ ಗಾಣಿಗನನ್ನು ದಸ್ತಗಿರಿ ಮಾಡಿ ಆತನ ವಿರುದ್ದ ಕುಂದಾಪುರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ರಾಘವೇಂದ್ರ ಮೇಲೆ ದೇಶದ್ರೋಹದ ಪ್ರಕರಣ ಹಾಕಲಾಗಿದೆ ಎಂದರು. ಪಾಕ್ ಪರ ರಾಘವೇಂದ್ರ ಗಾಣಿಗ ಘೋಷಣೆ ಕೂಗಿದ ಘಟನೆ ಬಗ್ಗೆ ಇನ್ನೂ ತನಿಖೆ ಮಾಡಬೇಕು. ರಾಘವೇಂದ್ರನ ಮಾತಿನಲ್ಲಿ ಸ್ಥಿರತೆ ಇಲ್ಲ ಆತನ ಹಿನ್ನೆಲೆ ಬಗ್ಗೆ ಪರಾಮರ್ಶೆ ನಡೆಸುತ್ತೇವೆ ಆತನ ಮಾನಸಿಕ ಸ್ಥಿತಿ ಬಗ್ಗೆ ಈಗಲೇ ಏನು ಕೂಡ ಹೇಳಲು ಸಾಧ್ಯವಿಲ್ಲ. ವೈದ್ಯಕೀಯ ವರದಿ ಬಂದ ಬಳಿಕವಷ್ಠೆ ಸ್ಪಷ್ಟ ಮಾಹಿತಿ ನೀಡಲು ಸಾಧ್ಯ ಎಂದರು.