ಬೆಳಗಾವಿ: ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆ ರಮೇಶ್ ಜಾರಕಿಹೊಳಿ ಅವರು ಯಾರ ಸಂಪರ್ಕಕ್ಕೂ ಕಳೆದ 9 ದಿನಗಳಿಂದ ಸಿಕ್ಕಿರಲಿಲ್ಲ ಹಾಗೂ ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಅವರ ನಡೆ ನಿಗೂಢವಾಗಿತ್ತು. ಆದರೆ ಇಂದು ಮುಂಜಾನೆ ಗೋಕಾಕ್ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಅವರು ಕಾಣಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಎಲ್ಲಿಗೆ ಹೋಗಿದ್ದರು ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.










