ಮೂಡಿಗೆರೆ- ತಾಲೂಕಿನ ಹ್ಯಾಂಡ್ ಪೊಸ್ಟ್ ಸಮೀಪದ ಬೈದವಳ್ಳಿ ಕ್ರಾಸ್ ಬಳಿ ನೀರಿನ ಕಾಮಗಾರಿಗಾಗಿ ಕಳೆದ ಎರಡು ವರ್ಷಗಳ ಹಿಂದೆ ಗುಂಡಿ ತೋಡಲಾಗಿದ್ದು, ಆದರೆ ಇನ್ನು ಕೂಡ ಗುಂಡಿ ಮುಚ್ಚದ ಕಾರಣ ಅಧಿಕ ಮಳೆಯಿಂದ ಹೊಂಡವಾಗಿದ್ದು, ಹಾಗೂ ಎರಡು ಬದಿಗೂ ರಾಪ್ಷ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆಗೆ ಮಣ್ಣನ್ನು ಹಾಕಿದ್ದು, ಹ್ಯಾಂಡ್ ಪೊಸ್ಟ್ ಸರ್ಕಲ್ ನಿಂದ ಕೃಷಿ ವಿಜ್ಞಾನ ಕಾಲೇಜಿನ ವರೆಗೂ ರಸ್ತೆಯ ಎರಡು ಬದಿಯೂ ಭತ್ತದ ಗದ್ದೆಗಳಂತೆ ಆಗಿದ್ದು,

ದಿನನಿತ್ಯ ಕೃಷಿ ವಿಜ್ಞಾನ ಕಾಲೇಜಿನ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕೆಸರಿನ ಸ್ನಾನವಾಗುತ್ತಿದ್ದು, ಈ ಬಗ್ಗೆ ಗ್ರಾಮಪಂಚಾಯಿತಿ ಅಧಿಕಾರಿಗಳು ಹಾಗೂ ರಾಪ್ಷ್ರೀಯ ಹೆದ್ದಾರಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರೋದು ದುರಂತ. ಇಲ್ಲಿ ದಿನನಿತ್ಯ ಸಣ್ಣ ಪುಟ್ಟ ಅಪಘಾತಗಳು ಆಗುತ್ತಿದ್ದು, ಈ ಬಗ್ಗೆ ಕೂಡಲೇ ಗಮನ ಹರಿಸಿ ಗುಂಡಿ ಮುಚ್ಚಿಸಿ ಕೆಸರು ತುಂಬಿದ ಎರಡು ಬದಿಯನ್ನು ಸರಿಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಧ್ವನಿ ಸಂಘದ ಬ್ರಿಜೇಶ್ ಕಡಿದಾಳ್ ಎಚ್ಚರಿಕೆ ನೀಡಿದ್ದಾರೆ.