ಬಿಳಗುಳದಲ್ಲಿ ಎಲ್ಲಾ ವೇಗದೂತ ಬಸ್‍ಗಳನ್ನು ನಿಲ್ಲಿಸುವಂತೆ ಪೀಸ್ ಅಂಡ್ ಅವೇರ್ನೆಸ್ ಟ್ರಸ್ಟ್ ನಿಂದ ಮನವಿ…

313

ಮೂಡಿಗೆರೆ: ಬಿಳಗುಳದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ಬಸ್‍ಗಳನ್ನು ನಿಲ್ಲಿಸಲು ಪೀಸ್ ಅಂಡ್ ಅವೇರ್ನೆಸ್ ಟ್ರಸ್ಟ್ ನಿಂದ ಮೂಡಿಗೆರೆ ಬಸ್ ನಿಲ್ದಾಣದ ಕಚೇರಿಯಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಬಿಳಗುಳ ಗ್ರಾಮದಿಂದ ಸಾರ್ವಜನಿಕರು ಸೇರಿದಂತೆ ಪ್ರತಿನಿತ್ಯವೂ ಅತ್ಯಧಿಕವಾಗಿ ಇಲ್ಲಿನ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದು, ಇವರ ಅನುಕೂಲಕ್ಕಾಗಿ ನೂತನ ಬಸ್ ನಿಲ್ದಾಣವನ್ನು ಇತ್ತೀಚಿಗೆ ಸ್ಥಾಪಿಸಲಾಗಿದ್ದು, ಆದರೆ ಈ ನಿಲ್ದಾಣದಲ್ಲಿ ಸ್ಥಳೀಯ ಬಸ್‍ಗಳ ನಿಲುಗಡೆಯನ್ನು ಹೊರತುಪಡಿಸಿ ಯಾವುದೇ ಘಟಕದ ವೇಗದೂತ ಬಸ್‍ಗಳನ್ನು ನಿಲ್ಲಿಸುತ್ತಿಲ್ಲ. ಎಂಬಂತಹ ಕೂಗು ಇಲ್ಲಿನ ಸಾರ್ವಜನಿಕರಲ್ಲಿ ಇರುವುದನ್ನು ಮನಗಂಡು  ಟ್ರಸ್ಟ್ ನ ಸಂಸ್ಥಾಪಕರಾದ ಅಲ್ತಾಫ್ ಬಿಳಗುಳ ಹಾಗೂ ಸಾರ್ವಜನಿಕರು ಪಟ್ಟಣದ ಬಸ್ ನಿಲ್ದಾಣದಲ್ಲಿರುವ ನಿಲ್ದಾಣಾಧಿಕಾರಿಗಳಿಗೆ ವೇಗದೂತ ಬಸ್‍ಗಳನ್ನು ನಿಲ್ಲಿಸಿ ಬಿಳಗುಳ ಗ್ರಾಮದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಪ್ರಸಾದ್, ಸದಸ್ಯರಾದಂತಹ ಟೋಂವಿಲ್ಲಿ, ಸೇರಿದಂತೆ ಇತರರು ಇದ್ದರು.