ರಾಕಿಂಗ್ ಸ್ಟಾರ್ ಗಡ್ಡಕ್ಕೆ ಕತ್ತರಿ, ಹೊಸ ಲುಕ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ …

478
firstsuddi

ಬೆಂಗಳೂರು-ರಾಕಿಂಗ್ ಸ್ಟಾರ್ ಯಶ್ ಎರಡು ವರ್ಷಗಳ ನಂತರ ತಮ್ಮ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದು,ಯಶ್ ಕೆ ಜಿ ಎಫ್ ಚಿತ್ರಕ್ಕಾಗಿ ಉದ್ದನೆಯ ಗಡ್ಡ ಹಾಗೂ ತಲೆ ಕೂದಲನ್ನು ಬೆಳೆಸಿಕೊಂಡಿದ್ದು , ಯಶ್  ಗಡ್ಡ ಹಾಗೂ ಉದ್ದನೆಯ ಕೂದಲಿಗೆ ಕತ್ತರಿ ಹಾಕುತ್ತಿರುವ ವಿಡಿಯೋವನ್ನು ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಯಶ್ ಅವರ ಈ ಹೊಸ ಲುಕ್ ನೋಡಿ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದು, ಅಲ್ಲದೇ ರಾಧಿಕಾ ಪಂಡಿತ್ ಅವರಿಗೂ ಯಶ್ ಅವರ ಈ ಲುಕ್ ಇಷ್ಟವಿರಲಿಲ್ಲ.ರಾಧಿಕಾ ಪಂಡಿತ್  ವಿಡಿಯೋದಲ್ಲಿ  ಈಗ ನನಗೆ ತುಂಬಾ ಖುಷಿಯಾಗುತ್ತಿದೆ. ನನ್ನ ಜೊತೆ ನೀವೆಲ್ಲರೂ ಕಾಯುತ್ತಿರುವ ಯಶ್ ಅವರ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಮುಕ್ತಿ ಸಿಗುತ್ತಿದೆ. ನನ್ನ ಗಂಡ ಹೇಗೆ ಕಾಣಿಸುತ್ತಿದ್ದರು ಎಂದು ನನಗೆ ನೆನಪಿಲ್ಲ. ಸದ್ಯ ಕಿರಾತಕ ಚಿತ್ರತಂಡಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಅವರಿಂದಾಗಿ ಯಶ್ ತಮ್ಮ ಗಡ್ಡ ಹಾಗೂ ಉದ್ದನೆಯ ಕೂದಲನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿದ ಯಶ್ ನನಗೆ ನನ್ನ ಗಡ್ಡ ತೆಗೆಯಲು ಇಷ್ಟವಿಲ್ಲ ಏಕೆಂದರೆ ಎರಡು ವರ್ಷದಿಂದ ನನ್ನ ಗಡ್ಡ ನನ್ನ ಜೊತೆಯಲ್ಲೇ ಇತ್ತು. ಆದರೆ ನನ್ನ ಗಡ್ಡ ಬೇರೆಯವರಿಗೆ ಇಷ್ಟವಿಲ್ಲ. ಹಾಗಾಗಿ ನಾನು ಗಡ್ಡ ತೆಗೆಯುತ್ತಿದ್ದೀನಿ. ಗಡ್ಡ ಇರಲಿ ಎಂದು ನಿರ್ದೇಶಕರ ಹತ್ತಿರ ಮನವಿ ಮಾಡಿಕೊಂಡೆ. ಆದರೆ ಅವರು ಒಪ್ಪಲಿಲ್ಲ. ಸದ್ಯ ನಾನು ಗಡ್ಡ ತೆಗೆಯುವುದರಿಂದ ಎಲ್ಲರಿಗೂ ಖುಷಿಯಾಗುತ್ತಿದೆ. ಆದರೆ ನನಗೆ ಬೇಜಾರ್ ಆಗುತ್ತಿದೆ ಎಂದು ಯಶ್ ಹೇಳಿದ್ದಾರೆ.