ಸ್ವಯಂಘೋಷಿತ ದೇವಮಾನವ ರಾಮ್​ಪಾಲ್​ಗೆ ಜೀವಾವಧಿ ಶಿಕ್ಷೆ…

260
firstsuddi

ಹಿಸ್ಸಾರ್: ಎರಡು ಕೊಲೆ ಪ್ರಕರಣದ ಆರೋಪ ಹೊತ್ತಿದ್ದ ಸ್ವಯಂಘೋಷಿತ ದೇವಮಾನವ ರಾಮ್​ಪಾಲ್​ಗೆ ಇಂದು ಹರಿಯಾಣದ ಸ್ಥಳೀಯ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದ್ದು.2014ರ ನವೆಂಬರ್ 8ರಂದು ಬರ್ವಾಲದ ಸತ್ಲೋಕ್ ಆಶ್ರಮದಲ್ಲಿ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವು ಹಾಗೂ 2014ರ ನವೆಂಬರ್ 19ರಂದು ರಾಮ್​ಪಾಲ್ ನನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಉಂಟಾದ ಗಲಭೆಯಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಮೃತಪಟ್ಟಿದ್ದ ಪ್ರಕರಣದಲ್ಲಿ ರಾಮ್​ಪಾಲ್​ಗೆ ಶಿಕ್ಷೆಯಾಗಿದೆ. ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಆರ್. ಚಾಲಿಯಾ ಅವರು ತೀರ್ಪು ಪ್ರಕಟಿಸಿದ್ದಾರೆ.