ಬೆಂಗಳೂರು: ತೆಲುಗು ನಟ ನಂದಮೂರಿ ಹರಿಕೃಷ್ಣ ಅವರ ಅಕಾಲಿಕ ನಿಧನಕ್ಕೆ ನಟ ಶಿವರಾಜ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮಾಧ್ಯಮದವರ ಜತೆ ಮಾತನಾಡಿ, ಅವರ ಸಾವಿನಿಂದ ತಮಗೆ ತುಂಬಾ ನೋವಾಗಿದೆ. ನಮ್ಮ ಕುಟುಂಬಕ್ಕೆ ತುಂಬ ಹತ್ತಿರವಾಗಿದ್ದರು. ಕೆಲವು ದಿನಗಳ ಹಿಂದೆ ಹೈದರಾಬಾದ್ ನಲ್ಲಿ ಭೇಟಿಯಾಗಿದ್ದೆ.ನನ್ನ ದೊಡ್ಡ ಮಗಳು ಮದುವೆಗೆ ಕರಿಯಬೇಕಾದರೆ ಎಷ್ಟು ಖುಷಿಯಿಂದ ಮಾತನಾಡಿದ್ದರು. ಈಗ ಇಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ .ನಾನು ಅವರ ಫ್ಯಾಮಿಲಿಗೆ ಕೇಳೋದ್ ಒಂದೇ ದಯವಿಟ್ಟು ನೈಟ್ ಜರ್ನಿ ಬೇಡ, ಸ್ವಲ್ಪ ಹುಷಾರಾಗಿರಿ. ಹರಿಕೃಷ್ಣ ಅವರ ನಿಧನದಿಂದ ಅವರ ಕುಟುಂಬವರ್ಗದವರಿಗೆ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ವ್ಯಕ್ತ ಪಡಿಸಿದ್ದಾರೆ.










