ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ,ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ …

418
firstsuddi

ಮೂಡಿಗೆರೆ: ಮೂರು ಕಾಡಾನೆಗಳ ದಾಳಿಗೆ ಅಡಿಕೆ, ಕಾಫಿ, ಮೆಣಸು ಹಾಗೂ ಭತ್ತ ನಾಶವಾಗಿರೋ ಘಟನೆ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದೊಂದು ತಿಂಗಳಿಂದ ಕಾಡಂಚಿನ ಗ್ರಾಮಗಳಲ್ಲೇ ಬೀಡು ಬಿಟ್ಟಿರೋ ಮೂರು ಕಾಡಾನೆಗಳಿಂದ ಐದಾರು ಗ್ರಾಮಗಳ ಜನ ಹೈರಾಣಾಗಿದ್ದಾರೆ. ಗುತ್ತಿಹಳ್ಳಿ ಸುತ್ತಮುತ್ತಲಿನ ಮೂಲರಹಳ್ಳಿ, ಬೈರಾಪುರ ಆನೆಗಳ ಹಾವಾಳಿ ಮಿತಿಮೀರಿದೆ. ಮೂಲರಹಳ್ಳಿ ರಘು ಎಂಬುವರಿಗೆ ಸೇರಿದ ಜಮೀನು ಹಾಗೂ ತೋಟ ಸೇರಿದಂತೆ ನಾಲ್ಕೈದು ಜನರ ತೋಟ ಹಾಳಾಗಿದೆ. ಆನೆಗಳು ಬೀಡುಬಿಟ್ಟಿರೋ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ರು, ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.